ಧಾರವಾಡ: ಮೊನ್ನೆಯಷ್ಟೇ ಬಿಜೆಪಿ ಸೇರಿದ್ದ ಕಾಂಗ್ರೆಸ್ ಮುಖಂಡರ “ಆ” ಪೋಟೊಗಳು ವೈರಲ್…!!!

ಧಾರವಾಡ: ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು, ಇತ್ತೀಚೆಗೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಪಾಂಡುರಂಗ ನೀರಲಕೇರಿಯವರ ಪೋಟೋಗಳು ಬಹುತೇಕರನ್ನ ಸೆಳೆಯುತ್ತಿವೆ.
ತಮ್ಮ ಪತ್ನಿ ರಾಜೇಶ್ವರಿ ಅವರ ಜೊತೆಗೆ ಕುಳಿತಿರುವ ಪೋಟೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅವರೇ ಹಂಚಿಕೊಂಡಿದ್ದು, ಸಹಬಾಳ್ವೆಯ ಬದುಕಿನ ಮರ್ಮವನ್ನ ತೋರಿಸಿಕೊಟ್ಟಿದ್ದಾರೆ.
ಎಂತಹ ಸಮಯದಲ್ಲಿಯೂ ಒಬ್ಬರಿಗೊಬ್ವರು ಕೂಡಿರಬೇಕೆಂಬ ಭಾವನೆ ಮೂಡಿಸುವ ಭಾವಚಿತ್ರಗಳು, ನೀರಲಕೇರಿಯವರ ಮನೋಭಾವನೆಯನ್ನ ತೋರಿಸುತ್ತಿವೆ.
ನ್ಯಾಯವಾದಿ ಪಾಂಡುರಂಗ ನೀರಲಕೇರಿಯವರ ಕುಟುಂಬ ಇನ್ನಷ್ಟು ಖುಷಿಯಿಂದ ಇರಲಿ. ಇತರರಿಗೂ ಮಾದರಿಯಾಗಿರಲಿ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.