ಧಾರವಾಡದ ಕಮಲಾಪುರದಲ್ಲಿ “ಮಗು ಹತ್ಯೆ”- ಹೆತ್ತವ್ವಳಿಂದಲೇ ನಡೀತಾ ದುರಂತ…!?

ಧಾರವಾಡ: ವಿದ್ಯಾಕಾಶಿಯಲ್ಲಿ ಕೊಲೆಗಳ ಸರಣಿ ಮುಂದುವರೆದಿದ್ದು, ಕಮಲಾಪುರದಲ್ಲಿ ಐದು ವರ್ಷದ ಕಂದಮ್ಮಳನ್ನ ಹೆತ್ತ ತಾಯಿಯೇ ಹತ್ಯೆ ಮಾಡಿದ್ದಾಳೆಂದು ಹೇಳಲಾಗಿದೆ.
ಸಹನಾ ಹಿರೇಮಠ ಎಂಬ ವಿಕಲಚೇತನ ಮಗುವನ್ನೇ ಹೆತ್ತವ್ವಳಾದ ಜ್ಯೋತಿ ಕಲ್ಲಯ್ಯ ಹಿರೇಮಠ ಎಂಬುವವಳೇ ಕಮಲಾಪುರದಲ್ಲಿ ಶಾಲೆಯ ಪಕ್ಕದ ಹೂಗಾರ ಓಣಿಯ ಮನೆಯಲ್ಲಿ ಹತ್ಯೆ ಮಾಡಿದ್ದಾಳೆಂದು ಹೇಳಲಾಗಿದೆ.
ಜ್ಯೋತಿ ಎಂಬಾಕೆ ತನ್ನ ಮದುವೆಯ ಗಂಡನನ್ನ ಬಿಟ್ಟು ಬಂದು ನವನಗರದ ಓರ್ವನೊಂದಿಗೆ ಸಂಪರ್ಕ ಹೊಂದಿದ್ದಳೆಂದು ಹೇಳಲಾಗಿದ್ದು, ವಿಕಲಚೇತನ ಮಗು ಇರಬಾರದೆಂದು ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು ಪೊಲೀಸರು ಶವವನ್ನ ಆಸ್ಪತ್ರೆಗೆ ರವಾನೆ ಮಾಡಿ, ವಿಚಾರಣೆ ನಡೆಸುತ್ತಿದ್ದಾರೆ.