ಧಾರವಾಡದ ಜೆಎಸ್‌ಎಸ್ ಕಾಲೇಜ್ ಕ್ಯಾಂಪಸ್‌ನೊಳಗೆ ಕಂಪೌಂಡಗೆ ಡಿಕ್ಕಿ ಹೊಡೆದು ಒಳನುಗ್ಗಿದ “ರಕ್ಕಸ ಚಿಗರಿ” ಬಸ್…

ಧಾರವಾಡ: ಬಿಆರ್‌ಟಿಎಸ್ ಮಾರ್ಗದಲ್ಲಿ ತೆರಳುತ್ತಿದ್ದ ಚಿಗರಿ ಬಸ್ ನಿಯಂತ್ರಣ ತಪ್ಪಿ ವಿದ್ಯಾಗಿರಿಯಲ್ಲಿನ ಜೆಎಸ್‌ಎಸ್ ಕ್ಯಾಂಪಸ್‌ನೊಳಗೆ ನುಗ್ಗಿರುವ ಘಟನೆ ನಡೆದಿದ್ದು, ಹಲವರು ಪ್ರತಿಭಟನೆ ಆರಂಭಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ…
ಚಿಗರಿ ಬಸ್ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ, ಕ್ಯಾಂಪಸ್‌ನೊಳಗೆ ನುಗ್ಗಿದೆ. ರವಿವಾರವಾಗಿದ್ದರಿಂದ ಯಾವುದೇ ವಿದ್ಯಾರ್ಥಿಗಳು ಈ ಸ್ಥಳದಲ್ಲಿ ಇರಲಿಲ್ಲ.
ಸ್ಥಳದಲ್ಲಿನ ದೃಶ್ಯಾವಳಿ..
ಚಿಗರಿ ಬಸ್‌ನ ಆವಾಂತರಗಳು ಆಗಾಗ ನಡೆಯುತ್ತಲೇ ಇವೆ. ಈ ಸಾರಿಗೆಯನ್ನ ಬಂದ್ ಮಾಡುವಂತೆ ಈಗಾಗಲೇ ಹೋರಾಟಗಳು ನಡೆಯುತ್ತಲೇಯಿವೆ. ಆದರೂ, ಈ ಚಿಗರಿ ಬಸ್‌ಗೆ ಕಡಿವಾಣ ಬೀಳುತ್ತಿಲ್ಲ.
ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.