ಧಾರವಾಡ: CEOರನ್ನ ಅಂಧಕಾರದಲ್ಲಿಟ್ಟು ಕೋಟಿ ಕೋಟಿ ಬಿಲ್‌ಗೆ ಪ್ರಸ್ತಾವನೆ- ಯೋಜನಾಧಿಕಾರಿ ರೇಖಾ ಡೊಳ್ಳಿನವರ ಅಮಾನತ್ತು…

ಧಾರವಾಡ: ಜಿಲ್ಲಾ ಪಂಚಾಯತ ಯೋಜನಾಧಿಕಾರಿಯೊಬ್ಬರು ಸಂಬಂಧಿಸಿದ ಅಧಿಕಾರಿಗಳನ್ನ ಅಂಧಕಾರದಲ್ಲಿಟ್ಟು ಕೋಟಿ ಕೋಟಿ ರೂಪಾಯಿ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದ ಪರಿಣಾಮ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಯೋಜನಾಧಿಕಾರಿ ರೇಖಾ ಡೊಳ್ಳಿನವರ ಎಂಬುವವರನ್ನ ಅಮಾನತ್ತು ಮಾಡಲಾಗಿದೆ. ಜಿಲ್ಲಾಮಟ್ಟದ ಪ್ರಸ್ತಾವನೆಯನ್ನ ಸಲ್ಲಿಸುವಾಗ ಎಲ್ಲ ಕಾನೂನನ್ನ ಗಾಳಿಗೆ ತೂರಲಾಗಿದೆ ಎಂಬುದರ ಮೇಲೆ ಅಮಾನತ್ತು ಮಾಡಲಾಗಿದೆ.
ಐಟಿ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಬರೋಬ್ಬರಿ ಮೂರು ಕೋಟಿ ಅರವತೈದು ಲಕ್ಷ ಎಪ್ಪತ್ತು ಸಾವಿರ ರೂಪಾಯಿ ಮೊತ್ತದ ಹಣವನ್ನ ಬಿಡುಗಡೆ ಮಾಡಲು ಪ್ರಸ್ತಾವನೆಯನ್ನ ಕಾನೂನು ಬಾಹಿರವಾಗಿ ಯೋಜನಾಧಿಕಾರಿ ರೇಖಾ ಡೊಳ್ಳಿನವರ ಸಲ್ಲಿಸಿದ್ದರು.