ಧಾರವಾಡದ ಬೈಪಾಸ್‌ನಲ್ಲಿ ಹೊತ್ತಿ ಉರಿಯುತ್ತಿದೆ ಕ್ಯಾಂಟರ್- Exclusive Video…

ಧಾರವಾಡ: ವಾಣಿಜ್ಯನಗರಿಂದ ಕುಂದಾನಗರಿಯತ್ತ ಹೊರಟಿದ್ದ ಕ್ಯಾಂಟರ್ ವಾಹನವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಹೋಗುತ್ತಿರುವ ಘಟನೆ ಡೈರಿಯ ಸಮೀಪದಲ್ಲಿ ಸಂಭವಿಸಿದೆ.
ಹತ್ತಿ ಬೀಜವನ್ನ ಸಾಗಾಟ ಮಾಡುತ್ತಿದ್ದ ವಾಹನದಲ್ಲಿ ಬೆಂಕಿ ತಗುಲಿದೆ. ಕ್ಲೀನರ್ ಮತ್ತು ಚಾಲಕ ಕೆಳಗಿಳಿದು ಪ್ರಾಣವುಳಿಸಿಕೊಂಡಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ, ಬೆಂಕಿ ನಂದಿಸಲು ಯತ್ನಿಸುತ್ತಿದ್ದಾರೆ.