ಧಾರವಾಡ ಜಿಲ್ಲೆಯಲ್ಲಿ “ಹವಾ” ಸೃಷ್ಟಿಸಿದ ‘ಬ್ಯಾಹಟ್ಟಿ ಪ್ರಿಮಿಯರ್ ಲೀಗ್’….

ಧಾರವಾಡ: ಗ್ತಾಮೀಣ ಪ್ರದೇಶದಲ್ಲಿ ಹೊಸ ಭಾಷ್ಯ ಬರೆಯಲು ರೋಹಿತ ಮತ್ತಿಹಳ್ಳಿ ಗೆಳೆಯರ ಬಳಗವೂ ಮುನ್ನುಡಿ ಬರೆದಿದ್ದು, ಅಮೋಘವಾಗಿ ಲೀಗ್‌ಗೆ ಚಾಲನೆ ಕೊಡಲಾಗಿದೆ.
ಹೌದು… ಬ್ಯಾಹಟ್ಟಿ ಪ್ರಿಮಿಯರ್ ಲೀಗ್ ಅದ್ಧೂರಿಯಾಗಿ ಚಾಲನೆಗೊಂಡಿದೆ. ಕುಸುಗಲ್, ಸುಳ್ಳ, ಹೆಬಸೂರ, ಕಿರೇಸೂರ ಗ್ರಾಮದ ಪ್ರತಿಭಾನ್ವಿತ ಆಟಗಾರರು ಬ್ಯಾಹಟ್ಟಿ ಗ್ರಾಮದವರ ಜೊತೆಗೂಡಿ ಟೀಂಗಳನ್ನ ರಚನೆ ಮಾಡಲಾಗಿದೆ.
ವೀಡಿಯೋ….
ಐಪಿಎಲ್ ಮಾದರಿಯಲ್ಲಿ ತಂಡಗಳನ್ನ ರಚನೆ ಮಾಡಲಾಗಿದ್ದು, ಆರು ತಂಡಗಳ ಮಾಲೀಕರು ತಮ್ಮ ಆಟಗಾರರನ್ನ ಖರೀದಿ ಮಾಡಿದ್ದಾರೆ. ಪಂದ್ಯಗಳು ಏಪ್ರಿಲ್ 13 ರಿಂದ ಬ್ಯಾಹಟ್ಟಿ ಗ್ರಾಮದ ನಿಂಗಪ್ಪ ಗುಡಿಯವರ ಹೊಲದಲ್ಲಿ ಆರಂಭಗೊಳ್ಳಲಿದೆ.
ತಂಡದ ಖರೀದಿ ಹಾಗೂ ಬಹುಮಾನಗಳ ಅನಾವರಣ ಕಾರ್ಯಕ್ರಮದಲ್ಲಿ ಗುರಪ್ಪ ಕಪ್ಲಿ, ವೀರನಗೌಡ ಮರಿಗೌಡರ, ಮೂಗಪ್ಪ ಬೆಟದೂರ, ಶಿವಾನಂದ ನವಲೂರ, ಮಹದೇವಪ್ಪ ಹೈಗರ, ಸೋಮಶೇಖರ ಪಟ್ಟಣಶೆಟ್ಟಿ, ತುಳಸಪ್ಪ ಹುಲಕೋಟಿ, ಗಂಗಪ್ಪ ಕುಸುಗಲ್, ಜೀವನಮುಕ್ತ ಬೈಯಲಮ್ಮನವರ, ಅಶೋಕ ಕಲಾಲ, ಮಲ್ಲಪ್ಪ ಕೋರಿ, ಡಾ.ಶಿವಾನಂದ ಪಾಟೀಲ, ರಾಜು ದ್ಯಾವನಗೌಡರ, ನಾಗರಾಜ ಕಾಳೆ, ಉಮೇಶ ಕೋರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಗ್ರಾಪಂ ಸದಸ್ಯ ರೋಹಿತ ಮತ್ತಿಹಳ್ಳಿ ಮಾತನಾಡಿ, ಈ ಲೀಗ್ ಆರಂಭಿಸುವ ಮುನ್ನ ಹಲವು ಅಡೆತಡೆಗಳು ಬಂದರೂ, ನಮ್ಮ ಯುವ ಪಡೆ ಅದನ್ನ ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.