ಧಾರವಾಡ- ಬಸ್ ಸೀಟ್‌ಲ್ಲಿ ಕೂತಾಗಲೇ ಮರಣ… ಹೌಹಾರಿದ ಸಹ ಪ್ರಯಾಣಿಕರು…!!!

ಧಾರವಾಡ: ದಾಂಡೇಲಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್‌ಗೆ ಹಳಿಯಾಳದಿಂದ ಹತ್ತಿದ ಪ್ರಯಾಣಿಕನೋರ್ವ ಕೂತಲ್ಲೇ ಸಾವಿಗೀಡಾದ ಘಟನೆ ನಡೆದಿದೆ.
ಸೀಟ್‌ಲ್ಲಿ ಕೂತ ಪ್ರಯಾಣಿಕ ಅಲ್ಲಿಯೇ ಕೂತಿದ್ದರಿಂದ ಬಸ್‌ನ್ನ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ, ವ್ಯಕ್ತಿಯೂ ತೀವ್ರ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆ ಗೊತ್ತಾಗಿದೆ.
ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿಯು ಯಾರು ಎಂಬ ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದು, ಇದು ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂಬುದು ಕೂಡಾ ಗೊತ್ತಾಗಿಲ್ಲ.