ಧಾರವಾಡದ ಟೋಲನಾಕಾ ಬಳಿ ಪಾದಚಾರಿಗೆ “ಚಿಗರಿ” ಡಿಕ್ಕಿ: ಹೆಚ್ಚಿದ “ಬ್ಯಾನ್ BRTS” ಘೋಷಣೆ….!!!
1 min readಧಾರವಾಡ: ಬಿಆರ್‌ಟಿಎಸ್ ಮಾರ್ಗದಲ್ಲಿ ಹೋಗಬೇಕಿದ್ದ ಚಿಗರಿ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ಧಾರವಾಡದ ಟೋಲನಾಕಾ ಬಳಿ ಸಂಭವಿಸಿದ್ದು, ಗಾಯಾಳುವನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಘಟನೆಯಲ್ಲಿ ಪಾದಚಾರಿಗೆ ತೀವ್ರವಾಗಿ ಗಾಯಗೊಂಡಿದ್ದು, ಅತೀವ ರಕ್ತಸ್ರಾವವಾಗಿದೆ. ಘಟನಾ ಸ್ಥಳಕ್ಕೆ ಧಾರವಾಡದ ಸಂಚಾರಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಿಆರ್‌ಟಿಎಸ್‌ನ ಚಿಗರಿ ಬಸ್‌ಗಳ ಅವಘಡಗಳು ಪದೇ ಪದೇ ನಡೆಯುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.