ಧಾರವಾಡದ ಕೋಳಿಕೇರಿಯಲ್ಲಿ “ಶಂಕರ ಶೇಳಕೆ” ಹಣ ಹೊಡೆದ್ರಾ… ಅದಕ್ಕಾಗಿಯೇ “ಹಿಟ್ಯಾಚಿ” ಮುಂದೆ ಮಲಗಿದ್ರಾ…!?

ಧಾರವಾಡ: ನಗರದ ಹೊಸಯಲ್ಲಾಪುರದಲ್ಲಿನ ಕೋಳಿಕೇರಿಯ ಕಾಮಗಾರಿ ಮಾಡುವಾಗ ಪಾಲಿಕೆ ಸದಸ್ಯ ಹಣಕ್ಕಾಗಿಯೇ ಪ್ರತಿಭಟನೆಯ ನಾಟಕವಾಡಿದ್ದರಾ ಎಂಬ ಪ್ರಶ್ನೆ ಮೂಡುವ ಸ್ಥಿತಿ ಬಂದೊದಗಿದೆ.
ಧಾರವಾಡ-71 ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರು ನೀಡಿರುವ ಹೇಳಿಕೆಯಲ್ಲಿ, ಪಾಲಿಕೆ ಸದಸ್ಯ ಹಣ ಬರದೇ ಇರುವುದಕ್ಕೆ ಹಿಟ್ಯಾಚಿ ಮುಂದೆ ಮಲಗಿರುವ ಹಾಗೇ ಮಾಡ್ತಾಯಿದ್ದರು ಎಂದಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಮಹತ್ತರ ಜವಾಬ್ದಾರಿಯ ಸಮಿತಿಯಲ್ಲಿಯೂ ಸ್ಥಾನ ಪಡೆದಿರುವ ಶಂಕರ ಶೇಳಕೆಯವರು ಹಣಕ್ಕಾಗಿ, ಜನರನ್ನ ತಪ್ಪು ದಾರಿಗೆ ಎಳೆದು ಸುಮ್ಮನಾಗಿದ್ದರೇ ಎಂಬ ಪ್ರಶ್ನೆ ಪ್ರಜ್ಞಾವಂತರನ್ನ ಕಾಡುತ್ತಿದೆ.
ಕೆಟ್ಟಾ ಕೊಳಕ ಗಲೀಜಿನಲ್ಲೂ ಹಣ ಹೊಡೆದ ಬಗ್ಗೆ ಆರೋಪ ಬಂದಿರುವುದರ ಬಗ್ಗೆ ಶಂಕರ ಶೇಳಕೆ ಏನು ಉತ್ತರ ಕೊಡ್ತಾರೋ ಕಾದು ನೋಡಬೇಕಿದೆ.