ಧಾರವಾಡ ಜಿಲ್ಲೆಗೆ “ಪ್ರಲ್ಹಾದ ಜೋಶಿಯವರು” ಮುಖ್ಯ- “ಕಾರ್ಯಕರ್ತರ” ಒಡಲಾಳ ಬಿಚ್ಚಿಟ್ಟ ಮುನೇನಕೊಪ್ಪ…!!!
1 min readಧಾರವಾಡ: ಜಿಲ್ಲೆಯಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗಬೇಕಾದ ಜವಾಬ್ಧಾರಿ ಕೇಂದ್ರ ಸಚಿವರು ಆಗಿರುವ ಜಿಲ್ಲೆಯ ಸಂಸದ ಪ್ರಲ್ಹಾದ ಜೋಶಿಯವರ ಮೇಲಿದೆ. ಕಾರ್ಯಕರ್ತರು ಹಲವು ಗೊಂದಲದಲ್ಲಿದ್ದಾರೆ. ಅದನ್ನೇಲ್ಲ ಸರಿ ಮಾಡಬೇಕೆಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಹೇಳಿರುವ ಹಿಂದೆ ಭಾರತೀಯ ಜನತಾ ಪಕ್ಷವನ್ನ ಮತ್ತಷ್ಟು ಗಟ್ಟಿಗೊಳಿಸಬೇಕು ಅನ್ನೋ ಪ್ರಬಲ ಬಯಕೆಯಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಆಗಿರುವ ಏರುಪೇರುಗಳು ಏನು ಎಂಬುದನ್ನ ಬಹಿರಂಗವಾಗಿ ಹೇಳುವ ಮೂಲಕ ಪಕ್ಷದಲ್ಲಿ ತಾವೂ ಕಾರ್ಯಕರ್ತರ ಧ್ವನಿಯಾಗಿರುತ್ತೇನೆ ಎಂಬುದನ್ನ ಸಾದರಪಡಿಸಿದ್ದಾರೆ.
ಪೂರ್ಣವಾಗಿ ನೋಡಿ… ವದಂತಿ ಹಬ್ಬಿಸುವವರ ಬುದ್ದಿಯಷ್ಟು ಎಂಬುದು ಗೊತ್ತಾಗತ್ತೆ…
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ತಮ್ಮ ಇಬ್ಬರು ಸಹೋದರರನ್ನ ಪ್ರಮುಖ ಹುದ್ದೆಗಳಲ್ಲಿ ಇದ್ದಾಗಲೇ ಕಳೆದುಕೊಂಡರು. ಹಾಗಂತ ಪಕ್ಷ ಕೊಟ್ಟ ಎರಡು ಜಿಲ್ಲೆಯ ಉಸ್ತುವಾರಿಯನ್ನ ಸಮರ್ಥವಾಗಿ ಒಂದೇ ಒಂದು ರೀತಿಯಲ್ಲಿ ಹೆಸರು ಕೆಡಿಸಿಕೊಳ್ಳದೇ ನಿಭಾಯಿಸಿದ್ದರು.
ಸೋಜಿಗವೆಂದರೇ, ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆ ನವಲಗುಂದ ಕ್ಷೇತ್ರಕ್ಕೆ ತಂದರೂ ಮತದಾರ ಪ್ರಭು ಕೈ ಹಿಡಿಯಲಿಲ್ಲ. ಆದರೆ, ಮುನೇನಕೊಪ್ಪ ಅವರ ವರ್ಚಸ್ಸು ಕಡಿಮೆಯಾಗಿಲ್ಲ, ಅನ್ನೋ ಕಾರಣಕ್ಕೆ ಮುನೇನಕೊಪ್ಪ ಅವರು ಕಾಂಗ್ರೆಸ್‌ಗೆ ಹೋಗ್ತಾರೆ ಅನ್ನೋ ‘ರೂಮರ್’ ಹಬ್ಬಿಸಲಾಯಿತು. ತಾಳ್ಮೆಯಿಂದ ಇದ್ದ ಮಾಜಿ ಸಚಿವರು, ಅದಕ್ಕೊಂದು ಬ್ರೇಕ್ ಹಾಕುವ ಜೊತೆಗೆ ತಾವೂ ಲೋಕಸಭಾ ಚುನಾವಣೆಗೆ ನಿಲ್ಲೋದಿಲ್ಲ ಎಂದು ಖಡಕ್ ಆಗಿಯೇ ಹೇಳಿದರು.
ಬಿಜೆಪಿಯ ಇವತ್ತಿನ ಸ್ಥಿತಿಯ ಬಗ್ಗೆಯೂ ಯಾವುದೇ ಮುಲಾಜಿಲ್ಲದೆ ಮಾತನಾಡಿದರು. ತಮಗೆ ಪಕ್ಷ ಹಲವು ಹುದ್ದೆಗಳನ್ನ ನೀಡಿದೆ. ನಾನು ನನ್ನ ಬಗ್ಗೆ ಮಾತನಾಡುವುದಿಲ್ಲ. ಪಕ್ಷ ಅಧಿಕಾರದಲ್ಲಿದ್ದಾಗ ಕಾರ್ಯಕರ್ತರಿಗೆ ಆಗಿರುವ ನೋವು ಏನು ಎಂಬುದನ್ನ ತಿಳಿಸುವ ಪ್ರಯತ್ನ ಮಾಡಿದರು.
ಧಾರವಾಡ ಜಿಲ್ಲೆಯಲ್ಲಿ ಹಲವರು ಪಕ್ಷ ತೊರೆದು ಹೋಗಿದ್ದರಿಂದ ಈಗ ಮನೆಗೆ ಸಂಸದ ಪ್ರಲ್ಹಾದ ಜೋಶಿಯವರು ಹಿರಿಯರು. ಅವರು ಎಲ್ಲರನ್ನೂ, ಎಲ್ಲವನ್ನೂ ಸರಿ ಮಾಡಿಕೊಂಡು ಹೋಗಬೇಕೆಂದು ವಯಕ್ತಿಕವಾಗಿ ಹೇಳಿದ್ದನ್ನ, ಬಹಿರಂಗವಾಗಿಯೂ ಹೇಳಿದರು.
ಕಳೆದ ಸಲ ಗ್ರಾಮ ಪಂಚಾಯತಿ ಸದಸ್ಯರ ಸತ್ಕಾರ ಕಾರ್ಯಕ್ರಮದಲ್ಲಿ ಬಿಜೆಪಿಯ ವಿಧಾನಪರಿಷತ್ ಸದಸ್ಯರನ್ನ ಆಹ್ವಾನ ಮಾಡದೇ ಇರುವುದು ಸರಿಯಲ್ಲ ಎಂದು ಮಾಜಿ ಸಚಿವ ಮುನೇನಕೊಪ್ಪ ಅವರು ಬಹಿರಂಗ ಮಾಡಿದ್ದರ ಹಿಂದೆ, ಮುಂದೆ ಇಂತಹ ಘಟನೆ ನಡೆಯಬಾರದೆಂಬ ಉದ್ದೇಶ ಹೊಂದಿರುವುದು ಮಾತ್ರ.
ಪತ್ರಿಕಾಗೋಷ್ಠಿ ಮುಗಿದ ಕೆಲವೇ ಸಮಯದಲ್ಲಿ ಸಂಸದ ಪ್ರಲ್ಹಾದ ಜೋಶಿಯವರು, ಮುನೇನಕೊಪ್ಪ ಅವರ ಬಗ್ಗೆ ಗೌರವ ವ್ಯಕ್ತಪಡಿಸಿ ಮಾತನಾಡಿದ್ರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಹೇಳಿಕೆ…
ಇಷ್ಟೇಲ್ಲ ನಡೆದ ನಂತರವೂ ಕೆಲವರು ಅವರದ್ದೆ ಆದ ರೀತಿಯಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಅವರ ವ್ಯಾಖ್ಯಾನವನ್ನ ವಿಶ್ಲೇಷಣೆ ಮಾಡುತ್ತಿದ್ದಾರೆ. ಇನ್ನೂ ಕೆಲವು ಮತಿಗೇಡಿಗಳು “ನಮ್ಮಗ್ ಸಂಶಯ, ಹೋಗುವಂಗ್ ಮಾತಾಡ್ಲಿಲಿಲ್ರೀ” ಎಂದು ಗೊಣಗುತ್ತಿದ್ದಾರೆ.
ಕಾರ್ಯಕರ್ತರ ಜೊತೆಗಿರುವ ಓರ್ವ ನಾಯಕ ಪಕ್ಷದ ಪ್ರಮುಖನಿಗೆ ಜವಾಬ್ದಾರಿ ವಹಿಸಿಕೊಳ್ಳಿ ಮತ್ತೂ ಕಾರ್ಯಕರ್ತರ ನೋವು ಏನಾಗಿದೆ ಎಂದು ಹೇಳುವ “ಚಾತೀ” ಹೊಂದಿರುವ ಧಾರವಾಡ ಜಿಲ್ಲೆಯ ರಾಜಕೀಯ ಕಟ್ಟಾಳು ಶಂಕರ ಪಾಟೀಲ ಮುನೇನಕೊಪ್ಪ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಒಂದಿಷ್ಟು ಡಬ್ಬಿಗಳು ಖಾಲಿಯಿದ್ದಾಗ ಶಬ್ಧ ಮಾಡೋದು ಸಹಜ. ಆದರೆ, ಡಬ್ಬದಲ್ಲಿ ಬೆಂಕಿಯಿಟ್ಟುಕೊಂಡು ಅಲ್ಲಲ್ಲಿ ಹಚ್ಚುವ ಆತ್ಮಗಳಿಗೆ ‘ಓಂ ಶಾಂತಿ’ ಅಷ್ಟೇ ಹೇಳಬೇಕಲ್ಲವೇ..!?