ಧಾರವಾಡ: ಬೈಕ್‌ಗಳ ಮುಖಾಮುಖಿ “ಆರಡಿ ಹಾರಿ ಬಿದ್ದ ಸವಾರ”- ನೀವೆಂದೂ ನೋಡಿರದ ವೀಡಿಯೋ ಇಲ್ಲಿದೆ….
Exclusive
‘ಬೈಕ್’ಗಳ ನಡುವೆ ಮುಖಾಮುಖಿ ಡಿಕ್ಕಿ 6 ಅಡಿ ಹಾರಿ ಬಿದ್ದ ಬೈಕ್ ಸವಾರರು: ನೀವೆಂದೂ ನೋಡಿರದ ವೀಡಿಯೋ
ಧಾರವಾಡ: ಧಾರವಾಡ ಹೊರವಲಯದ ಕಮಲಾಪುರ-ಯಾದವಾಡ ರಸ್ತೆಯಲ್ಲಿ ಎರಡು ಬೈಕ್’ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರೂ 6 ಅಡಿ ಹಾರಿ ಕೆಳಗೆ ಬಿದ್ದು ಗಾಯಗೊಂಡ ಘಟನೆ ನಿನ್ನೇ (ಸೋಮವಾರ) ಮಧ್ಯಾಹ್ನ ನಡೆದಿದೆ.
ಯಾದವಾಡ ದಿಂದ ಕಮಲಾಪುರಕ್ಕೆ ಹಾಗೂ ಕಮಲಾಪುರದಿಂದ ಯಾದವಾಡಕ್ಕೆ ಹೋಗುತ್ತಿದ್ದ ಇಬ್ಬರು ಬೈಕ್ ಸವಾರರು ಅತಿ ಜೋರಾಗಿ ಬೈಕ್ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರನ್ನ ಸಾರ್ವಜನಿಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದು, ಬೈಕ್ ಸವಾರರು ಎಲ್ಲಿಯವರು ಎಂಬ ಮಾಹಿತಿ ತಿಳಿದು ಬಂದಿಲ್ಲ. ಧಾರವಾಡ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು ಬೈಕ್ ಸವಾರರ ಮಾಹಿತಿ ಕಲೆ ಹಾಕುತ್ತಿದ್ದಾರೆ.
