Posts Slider

Karnataka Voice

Latest Kannada News

ಧಾರವಾಡ: ಪಿ-2710 ಕೋವಿಡ್ ಪಾಸಿಟಿವ್ ವ್ಯಕ್ತಿಯ ಪ್ರಯಾಣ ವಿವರ

1 min read
Spread the love

ಧಾರವಾಡ: ಮೇ.28 ರಂದು ಕೋವಿಡ್ 19 ದೃಢಪಟ್ಟಿರುವ ಜಿಲ್ಲೆಯ  ಪಿ-2710 ಪ್ರಯಾಣ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ. ಪಿ-2710( 65 ವರ್ಷ, ಪುರುಷ)  ಇವರು ಹುಬ್ಬಳ್ಳಿ ನಗರದ ಬೆಂಗೇರಿ ನಿವಾಸಿಯಾಗಿದ್ದಾರೆ.

ಇವರು ಫೆಬ್ರುವರಿ 2020 ರ ತಿಂಗಳಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಮುಂಬೈಗೆ ಹೋಗಿದ್ದರು. ದಿನಾಂಕ : 25-05-2020 ರಂದು ಅನಾರೋಗ್ಯದ ನಿಮಿತ್ಯ ಚಿಕಿತ್ಸೆಗಾಗಿ ಮುಂಬೈನ ರಾಜವಾಡಿ ಆಸ್ಪತ್ರೆಗೆ ದಾಖಲಾಗಿದ್ದರು. ದಿನಾಂಕ: 26-05-2020 ರಂದು ಮುಂಬೈ ರಾಜವಾಡಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಧ್ಯಾಹ್ನ 01:30  ಕ್ಕೆ ಖಾಸಗಿ ಅಂಬ್ಯೂಲೆನ್ಸ್ (  ಎಂ.ಹೆಚ್. – 04 – ಎಫ್ ಕೆ  – 1480 ) ಮೂಲಕ ಕುಟುಂಬದ 06 ಸದಸ್ಯರು ಹಾಗೂ ಇಬ್ಬರು ವಾಹನ ಚಾಲಕರೊಂದಿಗೆ ಮುಂಬೈಯಿಂದ ಹೊರಟು ನಿಪ್ಪಾಣಿ ಚೆಕ್ ಪೋಸ್ಟ್‌ ನಲ್ಲಿ ತಪಾಸಣೆ ( ಥರ್ಮಲ್ ಸ್ಕ್ರೀನಿಂಗ್ ) ಮಾಡಿಸಿಕೊಂಡು ದಿನಾಂಕ : 27-05-2020 ರಂದು  ಬೆಳಿಗ್ಗೆ 07:30 ಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ . ಅಂದೇ ಇವರ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿರುತ್ತದೆ. ಇಬ್ಬರು ವಾಹನ ಚಾಲಕರು ವಾಪಸ್ ಮುಂಬಯಿಗೆ ಹಿಂದಿರುಗಿರುತ್ತಾರೆ .  ದಿನಾಂಕ : 28.05.2020 ರಂದು ಪಿ- 2710 ಇವರು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿರುತ್ತದೆ . ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ವ್ಯಕ್ತಿಯನ್ನು  ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೊಂಕು ತಗಲುವ ಸಾಧ್ಯತೆ ಇರುತ್ತದೆ. ಆ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು  ಎಂದು  ಪ್ರಕಟಣೆ ತಿಳಿಸಿದೆ.


Spread the love

Leave a Reply

Your email address will not be published. Required fields are marked *

You may have missed