ಧಾರವಾಡದಲ್ಲಿ “ಸಿನಿಮೀಯ ರೀತಿಯಲ್ಲಿ ಲಾಕ್” ಗಡಿಪಾರು ಗಡಿಬಿಡಿ…’ASI ತಲವಾಯಿ’ ಮಾಡಿದ್ದೇನು ಗೊತ್ತಾ….!!??
1 min readಧಾರವಾಡ: ಗಡಿಪಾರು ಆದೇಶಕ್ಕೆ ಒಳಗಾಗಿದ್ದ ಆರೋಪಿಯೋರ್ವ ಪೊಲೀಸರ ಕಣ್ತಪ್ಪಿಸಿ ನಗರದಲ್ಲಿ ತಿರುಗುತ್ತಿದ್ದವನನ್ನ ಸಿನೀಮಯ ರೀತಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಧಾರವಾಡ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೊದಲು ಕಾರ್ಯಾಚರಣೆಯ ಎಕ್ಸಕ್ಲೂಸಿವ್ ನೋಡಿಬಿಡಿ…
ಮೂಲತಃ ಯರಿಕೊಪ್ಪ ಗ್ರಾಮದ ಈರಣ್ಣ ಪಾಟೀಲ ಎಂಬಾತನಿಗೆ ಜಿಲ್ಲೆಯಿಂದ ಗಡಿಪಾರು ಮಾಡಿ ಕಳೆದ ಡಿಸೆಂಬರ್ 20 ನೇ ದಿನಾಂಕಕ್ಕೆ ಆದೇಶವನ್ನ ನವನಗರದ ಎಪಿಎಂಸಿ ಠಾಣೆಯ ಎಎಸ್ಐ ತಮ್ಮಾಜಿರಾವ್ ತಲವಾಯಿ ಮೂಲಕ ನೀಡಲಾಗಿತ್ತು. ಹಾಲಿಯಾಗಿ ಧಾರವಾಡದ ದಾನುನಗರದಲ್ಲಿ ಈರಣ್ಣ ಪಾಟೀಲ ಡಿಸೆಂಬರ್ 30 ರಂದು ಕೋಲಾರ ಜಿಲ್ಲೆಗೆ ಹೋಗಬೇಕಾಗಿತ್ತು.
ಗಡಿಪಾರು ಆದೇಶ ಪಡೆದು ಪೊಲೀಸರ ಕಣ್ಣು ತಪ್ಪಿಸಿ ಬಸ್ಸಿನಲ್ಲಿ ಸಂಚಾರ ಮಾಡುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಎಎಸ್ಐ ತಮ್ಮಾಜಿರಾವ್ ತಲವಾಯಿ, ಗಡಿಪಾರು ಆಸಾಮಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಗಡಿಪಾರಿಗೆ ಒಳಗಾಗಿರುವ ಈರಣ್ಣ ಪಾಟೀಲ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಧಾರವಾಡ ಶಹರ ಠಾಣೆಯಲ್ಲಿ ಮೂರು, ವಿದ್ಯಾಗಿರಿ ಠಾಣೆ ಹಾಗೂ ಧಾರವಾಡ ಉಪನಗರ ಠಾಣೆಯಲ್ಲಿ ತಲಾ ಒಂದು ಪ್ರಕರಣವಿದೆ.
ಎಎಸ್ಐ ತಲವಾಯಿ ಅವರ ಕಾರ್ಯಕ್ಷಮತೆಯನ್ನ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.