Posts Slider

Karnataka Voice

Latest Kannada News

ಧಾರವಾಡ ಸಂಚಾರಿ ಠಾಣೆ ಪೊಲೀಸರಿಗೆ ಸತ್ಕಾರ…!

1 min read
Spread the love

ಧಾರವಾಡ: ಸದಾಕಾಲ ಕಾನೂನು ಪಾಲನೆ ಮಾಡುತ್ತ, ಡಾ.ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನವನ್ನ ಸಾರ್ವಜನಿಕರಿಗೆ ತಿಳಿಸುತ್ತಲೇ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಧಾರವಾಡ ಸಂಚಾರಿ ಠಾಣೆಯ ಪೊಲೀಸರನ್ನ ಸಮಗಾರ ಶ್ರೀ ಹರಳಯ್ಯ ಸಮಾಜದ ಪಂಚ ಕಮೀಟಿ ನಗರದಲ್ಲಿ ಸತ್ಕರಿಸಿತು.

ಕಾರ್ಯಕ್ರಮದಲ್ಲಿ ಎಎಸ್ಐ ವಿರೇಶ ಬಳ್ಳಾರಿ ಮಾತನಾಡಿದ್ದೇನು…

ನಗರದ ಸುಭಾಸ ರಸ್ತೆಯಲ್ಲಿ ಆಯೋಜನೆ ಮಾಡಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಜಯಂತಿಯ ಸಮಯದಲ್ಲಿ ಎಎಸ್ಐ ವಿರೇಶ ಬಳ್ಳಾರಿ, ಎಎಸ್ಐ ಮಣಕವಾಡ, ಬಸಯ್ಯ ಹಿರೇಮಠ, ಅಲಿ ಹಾಡಕರ ಅವರುಗಳನ್ನ ಆತ್ಮೀಯವಾಗಿ ಸತ್ಕರಿಸಲಾಯಿತು.

ಈ ಸಮಯದಲ್ಲಿ ಮಾತನಾಡಿದ ಎಎಸ್ಐ ವಿರೇಶ ಬಳ್ಳಾರಿ, ಡಾ.ಅಂಬೇಡ್ಕರ ಅವರು ಹಾಕಿಕೊಟ್ಟ ಮಾರ್ಗವನ್ನ ಅನುಸರಿಸಿದರೇ ಸಾಕು ಬದುಕು, ಸುಖವಾಗಿ ಸಾಗುತ್ತದೆ. ಅವರು ನೀಡಿದ ನಿಯಮವನ್ನ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಪಂಚ ಕಮೀಟಿಯ ಅಧ್ಯಕ್ಷ ಸುನೀಲ ಹೊಂಗಲ, ಉಪಾಧ್ಯಕ್ಷ ರವಿ ಸಾಂಬ್ರಾಣಿ, ಕಾರ್ಯದರ್ಶಿ ಮಂಜುನಾಥ ಗಾಮನಗಟ್ಟಿ, ಸದಸ್ಯರುಗಳಾದ ಶ್ರೀಕಾಂತ ಮಂಗೋಡಿಕರ, ನಿಜಲಿಂಗ ದೊಡ್ಡಮನಿ, ವಿರುಪಾಕ್ಷಪ್ಪ ಗಾಮನಗಟ್ಟಿ, ಪೀರಪ್ಪ ಸವದತ್ತಿ, ಶಿವಾಜಿ ಸವದತ್ತಿ, ಅಶೋಕ ಭಂಡಾರಿ, ಶಂಕರ ವಕ್ಕುಂದ, ಜವಾಹರ ಕುಂದಗೋಳ, ಕಿರಣ ಕುಂದಗೋಳ, ರಘುನಾಥ ತೇರದಾಳ, ಸತೀಶ ಸರ್ಜಾಪುರ, ಮಂಜುನಾಥ ಯಾದವಾಡ, ಪ್ರೇಮಾ ಹೊಂಗಲ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed