‘ಲಾಯರ್ ಕಾರು’ ಹೆಸರಲ್ಲಿ ಗಾಂಜಾ ದಂಧೆ: ಕಾರು ಸಮೇತ ಸಿಕ್ಕಿಬಿದ್ದ “ಗಾಂಜಿ” ಗರು- 7ರ ಪೈಕಿ 6ಜನರ ಬಂಧನ
1 min readಧಾರವಾಡ: ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಗಾಂಜಾ ದಂಧೆಯನ್ನ ಪತ್ತೆ ಹಚ್ಚುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ವಕೀಲರ ಹೆಸರು ಹೇಳಿ ಹಲವರಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿರೆಂದು ತನಿಖೆಯಲ್ಲಿ ಗೊತ್ತಾಗಿದೆ.
ಶಹರ ಠಾಣೆ ಇನ್ಸ್‌ಪೆಕ್ಟರ್ ಸತಾರೆ ನೇತೃತ್ವದ ತಂಡ ಜಾವೇದ, ಪೃಥ್ವಿ, ಸಂಸ್ಕಾರ ಸೇರಿದಂತೆ ಆರು ಜನರನ್ನ ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕಾರು, ಬೈಕ್ ಹಾಗೂ ಮೂರು ಕೆಜಿ ನೂರು ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಡಿಸಿಪಿ ಕೃಷ್ಣಕಾಂತ ಮಾಹಿತಿ ನೀಡಿ, ಅವಳಿನಗರದಲ್ಲಿ ಬೇರು ಮಟ್ಟದಲ್ಲಿ ಈ ದಂಧೆಯನ್ನ ಅಳಿಸಿ ಹಾಕಲಾವುದೆಂದರು. ಈಗಾಗಲೇ ಆರೋಪಿಗಳಿಂದ ಮಾಲ್‌ನ್ನು ವಶಕ್ಕೆ ಪಡೆಯಲಾಗಿದೆ. ಇವರಿಗೆ ಸಪ್ಲಾಯ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.
ಚಾಣಾಕ್ಷ ಆರೋಪಿಗಳು ಕಾರಿಗೆ ಲಾಯರ್ ಎಂದು ಬರೆದು ‘ಲಾಯರ್ ಕಾರು’ ಎಂದು ಯಾಮಾರಿಸುತ್ತಿರೆಂದು ಗೊತ್ತಾಗಿದೆ.
ಧಾರವಾಡ ಮದಾರಮಡ್ಡಿಯ ಪೃಥ್ವಿ ಗಿರೀಶ ಕೊಂಡಪಲ್ಲಿ, ಧಾರವಾಡ ರಸೂಲಪುರ ಓಣಿ ಸತ್ಕಾರ ಮಾಡಲಗಿ, ಬಾರಾಇಮಾಮಗಲ್ಲಿಯ ಜಾವೇದ ಅಹ್ಮದ ಬದಾಮಿ, ನಿಜಾಮುದ್ದೀನ ಕಾಲನಿ ಮೆಹಬೂಬಸಾಬ ಪಠಾಣ, ಮಸಾಲಗಾರ ಓಣಿಯ ಮೊಹ್ಮದಸಾಧೀಕ ಖತೀಬ ಹಾಗೂ ಹತ್ತಿಕೊಳ್ಳದ ಅಬ್ದುಲಖಾದರಸಾಬ ದಾವಣಗೆರೆ ಬಂಧಿತ ಆರೋಪಿಗಳು. ಇನ್ನೋರ್ವ ನವಲೂರ ಗ್ರಾಮ ರಾಜೇಸಾಬ ಹಂಚಿನಾಳ ಪರಾರಿಯಾಗಿದ್ದಾನೆ.