ಧಾರವಾಡ ಅಂಜುಮನ್ ಸಂಸ್ಥೆಯ “ಹೆಡ್ ಮಾಸ್ಟರ್ ಮುಲ್ಲಾ” ದೋಖಾ… ನಕಲಿ ಲೇಟರ್ ಹೆಡ್ ಸೃಷ್ಟಿ…
1 min readಧಾರವಾಡ: ತಮಗೆ ಅನ್ನ- ನೀರು ನೀಡಿದ ಧಾರವಾಡದ ಅಂಜುಮನ್ ಸಂಸ್ಥೆಯ ನಕಲಿ ಲೇಟರ್ ಹೆಡ್ ಮಾಡಿಸಿ ಶಿಕ್ಷಕಿಯೊಬ್ಬರ ಲಕ್ಷ ಲಕ್ಷ ಸಂಬಳವನ್ನ ಪಡೆಯುವ ಹುನ್ನಾರವನ್ನ ನಡೆಸಲಾಗಿದೆ ಎಂಬುದರ ದಾಖಲೆಗಳು ಕರ್ನಾಟಕವಾಯ್ಸ್.ಕಾಂಗೆ ಲಭಿಸಿದ್ದು, ಇದರಲ್ಲಿ ಸಂಸ್ಥೆಯವರದ್ದು ಕೈವಾಡವಿದೆ ಎಂಬ ಶಂಕೆವ್ಯಕ್ತವಾಗಿದೆ.
ಹುಬ್ಬಳ್ಳಿಯ ಕೌಲಪೇಟೆಯ ಆಂಗ್ಲೋ ಉರ್ದು ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕಿ ತಸ್ನೀಮ ಕೌಸರ್ ಕುಡಚಿಕರ ಅವರನ್ನ ಧಾರವಾಡದ ಅಂಜುಮನ್ ಪ್ರೌಢಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ಅಸಲಿಗೆ ಅವರು ಅಂಜುಮನ್ ಗೆ ಬಂದು ‘ಜ್ವಾಯಿನ್’ ಆಗಿದ್ದು 15.07.2021 ಆದರೆ, ಅದಕ್ಕಿಂತ ಪೂರ್ವದಲ್ಲಿ ಅಂದರೆ, 26.10.2019 ರಲ್ಲೇ ಶಿಕ್ಷಕಿ ಶಾಲೆಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆಂಬ ಮತ್ತೊಂದು ದಾಖಲೆಯನ್ನ ಸೃಷ್ಟಿ ಮಾಡಲಾಗಿದೆ.
ಶಿಕ್ಷಕಿ ತಸ್ನೀಮ ಕುಡಚಿಕರ ಅವರ ವರ್ಗಾವಣೆಯಾಗಿದ್ದು 24.10.2019. ಅವರು ಅಂಜುಮನಗೆ ಬಂದಿದ್ದು 15.7.2021. ಈ ಬಗ್ಗೆ ಸ್ವತಃ ಹೆಡ್ ಮಾಸ್ಟರ್ ಗೆ ಶಿಕ್ಷಕಿ ಬರೆದುಕೊಟ್ಟಿದ್ದಾರೆ. ಆ ಪ್ರತಿಯೂ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ. ಆದರೆ, ಸರಕಾರದ ಹಣವನ್ನ ಲೂಟಿ ಹೊಡೆಯುವ ಉದ್ದೇಶದಿಂದ ನಕಲಿ ದಾಖಲೆಯನ್ನ ಸೃಷ್ಟಿಸಿ ಹಣ ಹೊಡೆಯಲು ನಿವೃತ್ತಿ ಅಂಚಿನಲ್ಲಿರುವ ಹೆಡ್ ಮಾಸ್ಟರ್ ಮುಲ್ಲಾ ಪ್ಲಾನ್ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಶಿಕ್ಷಕಿ ಕುಡಚಿಕರ ಅವರಿಂದಲೂ ಬರೋಬ್ಬರಿ ಐದು ಲಕ್ಷ ಹಣವನ್ನ ಪೀಕಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.
ಈ ಬಗ್ಗೆ ಧಾರವಾಡದ ಅಂಜುಮನ್ ಸಂಸ್ಥೆಯು ಸಮಗ್ರವಾದ ತನಿಖೆಯನ್ನ ಮಾಡಿಸಬೇಕಿದೆ. ಇಲ್ಲದಿದ್ದರೇ ಗೌರವ ಮಣ್ಣು ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.