Posts Slider

Karnataka Voice

Latest Kannada News

ಮಾನವೀಯ ಕಾರ್ಯಕ್ಕೆ ಮುಂದಾದ ಧಾರವಾಡ ಅಂಜುಮನ್…!

1 min read
Spread the love

ಧಾರವಾಡ: ಮಹಾಮಾರಿ ಕೊರೋನಾ ಸಮಯದಲ್ಲಿ ಧಾರವಾಡದ ಅಂಜುಮನ್ –ಎ- ಇಸ್ಲಾಂ ಸಂಸ್ಥೆಯು ಮಾನವೀಯ ಕಾರ್ಯಕ್ಕೆ ಮುಂದಾಗಿದ್ದು, ಸರ್ವ ಧರ್ಮದ ಅಂತ್ಯ ಸಂಸ್ಕಾರವನ್ನ ಸ್ವಂತ ಖರ್ಚಿನಲ್ಲಿ ಮಾಡಲು ಮುಂದಾಗಿದೆ.

ಕೊರೋನಾ ಸೋಂಕಿಗೆ ಮೃತಪಟ್ಟ ಸರ್ವ ಧರ್ಮದ ಜನರನ್ನ ಅವರದ್ದೇ ಪದ್ಧತಿಯಂತೆ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದು, ಅದಕ್ಕೆ ತಗುಲುವ ವೆಚ್ಚವನ್ನ ಸಂಸ್ಥೆಯು ಭರಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

ಇಂದು ನಡೆದ ಸಭೆಯಲ್ಲಿ ಈ ತೀರ್ಮಾನವನ್ನ ತೆಗೆದುಕೊಳ್ಳಲಾಗಿದ್ದು, ಸಾಂಕ್ರಾಮಿಕ ರೋಗದಿಂದ ಸಾವಿಗೀಡಾದವರ ಅಂತ್ಯ ಸಂಸ್ಕಾರವನ್ನ ಅಂಜುಮನ್ ಸಂಸ್ಥೆ ಹಾಗೂ ಲಜನತುಲ್ ಉಲೂಮಾ ಕಮೀಟಿ ವತಿಯಿಂದ ಮಾಡಲು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಸಂಸ್ಥೆಯ ಮಾಜಿ  ಅಧ್ಯಕ್ಷ ಇಸ್ಮಾಯಿಲ ತಮಾಟಗಾರ, ಉಪಾಧ್ಯಕ್ಷ ಅಶ್ಪಾಕ ಬೆಟಗೇರಿ, ಜಂಟಿ ಕಾರ್ಯದರ್ಶಿ ಶಕೀಲ ತಮಾಟಗಾರ, ಅಂಜುಮನ್ ಖಬರಸ್ಥಾನ ಕಮೀಟಿಯ ಚೇರಮನ್ನ ಅಹ್ಮದ ರಫೀಕ ಬಿಸ್ತಿ, ವೈಸ್ ಚೇರ್ಮನ ಮಹ್ಮದ ರಫೀಕ ಕಿರಶಾಳ, ಮೌಲಾನಾ ಹುಸೇನ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *