ಭೀಕರ ಅಪಘಾತ: ಧಾರವಾಡ-ಅಳ್ನಾವರ ರಸ್ತೆ ಬಂದ್- ಇಬ್ಬರ ಸ್ಥಿತಿ ಚಿಂತಾಜನಕ…
ಧಾರವಾಡ: ಮ್ಯಾಂಗನೀಸ್ ತುಂಬಿದ ಲಾರಿ ಹಾಗೂ ಕ್ಯಾಂಟರ್ ನಡುವೆ ಧಾರವಾಡ ಅಳ್ನಾವರ ರಸ್ತೆಯ ಮುಗದ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಎಕ್ಸಕ್ಲೂಸಿವ್ ವೀಡಿಯೋ…
ಮ್ಯಾಂಗನೀಸ್ ಲಾರಿ ಚಾಲಕನ ತಪ್ಪಿನಿಂದ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ರಸ್ತೆಯುದ್ದಕ್ಕೂ ಮ್ಯಾಂಗನೀಸ್ ಚೆಲ್ಲಿದೆ. ಕ್ಯಾಂಟರ್‌ನಲ್ಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ದಾರಿಹೋಕರು ಅವರನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯಿಂದ ಧಾರವಾಡ ಅಳ್ನಾವರ ರಸ್ತೆ ಸಂಪೂರ್ಣ ಬಂದ್ ಆಗಿದೆ. ಬೇರೆ ರಾಜ್ಯದಿಂದ ಗೋವಾಗೆ ಹೋಗುತ್ತಿದ್ದ ಪ್ರವಾಸಿಗರು ಕೂಡ ರಸ್ತೆಯಲ್ಲಿ ಸಮಯ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
