ಧಾರವಾಡ: ಗೆಳೆಯನನ್ನ ಬಿಡಲು ಹೋದವ ಸಾವು: ಗೆಳೆಯ ಸೇಫ್

ಧಾರವಾಡ: ಸಮಯಕ್ಕೆ ಸರಿಯಾಗಿ ಬಸ್ ಇರದೇ ಇದ್ದಿದ್ದರಿಂದ ಡ್ಯೂಟಿಗೆ ತೊಂದರೆಯಾಗಬಹುದೆಂದು ತನ್ನ ಜೊತೆ ಕೆಲಸ ಮಾಡುತ್ತಿದ್ದ ಗೆಳೆಯನನ್ನ ಬಿಡಲು ಹೊರಟ ಸಮಯದಲ್ಲಿ ಡಿವೈಡರಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಬಿಡಲು ಹೊರಟಿದ್ದ ವ್ಯಕ್ತಿಯೇ ಸಾವಿಗೀಡಾದ ಘಟನೆ ಮೈತ್ರಿ ಪ್ಯಾಲೇಸ್ ಹತ್ತಿರ ತಡರಾತ್ರಿ ಸಂಭವಿಸಿದೆ.
ನಿಗದಿ ಗ್ರಾಮದ ಗಂಗಾಧರ ಉರ್ಫ್ ಗಂಗಪ್ಪ ಪಾಟೀಲ ಎಂಬಾತನೇ ಸಾವಿಗೀಡಾಗಿದ್ದು, ಈತನೊಂದಿಗಿದ್ದ ಹುಬ್ಬಳ್ಳಿ ಕಮರಿಪೇಟೆಯ ನೀಲಕಂಠ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಇಬ್ಬರು ಕೂಡಿಕೊಂಡು ವಾಚಮನ್ ಕೆಲಸ ಮಾಡುತ್ತಿದ್ದರು. ಊಟ ಮುಗಿದ ನಂತರ ಡ್ಯೂಟಿಗೆ ತೊಂದರೆಯಾಗಬಾರದೆಂದು ಗಂಗಪ್ಪ ತನ್ನ ಗೆಳೆಯ ನೀಲಕಂಠನನ್ನ ಹುಬ್ಬಳ್ಳಿಗೆ ಬಿಡಲು ಹೊರಟಾಗ ಈ ದುರ್ಘಟನೆ ನಡೆದಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಧಾರವಾಡ ಸಂಚಾರಿ ಠಾಣೆ ಪೊಲೀಸರು, ಮುಂದಿನ ತನಿಖೆಯನ್ನ ಕೈಗೊಂಡಿದ್ದಾರೆ.