ಧಾರವಾಡ ಮೈತ್ರಿ ಪ್ಯಾಲೇಸ್ ಬಳಿ ಬೈಕಿಗೆ ಬೇಂದ್ರೆ ಬಸ್ ಡಿಕ್ಕಿ- ಅಮರಗೋಳದ ಉಮೇಶ ದುರ್ಮರಣ…!!!

ಧಾರವಾಡ: ನಗರದ ಟೋಲನಾಕಾ ಬಳಿಯ ಮೈತ್ರಿ ಪ್ಯಾಲೇಸ್ ಬಳಿಯಲ್ಲಿ ಬೇಂದ್ರೆ ನಗರ ಸಾರಿಗೆ ಬಸ್, ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವಿಗೀಡಾದ ಘಟನೆ ನಡೆದಿದೆ.
ಘಟನೆಯಲ್ಲಿ ಅಮರಗೋಳದ 55 ವರ್ಷದ ಉಮೇಶ ಅಂಗಡಿ ಎಂಬುವವರು ಸಾವಿಗೀಡಾಗಿದ್ದು, ನಗರ ಸಾರಿಗೆ ಬಸ್ ಚಾಲಕನ ಬಗ್ಗೆ ಪೊಲೀಸರು ಮಾಹಿತಿಯನ್ನ ಕಲೆ ಹಾಕಿದ್ದಾರೆ.
ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.