10ಕ್ಕೂ ಹೆಚ್ಚು ಜನರನ್ನ ಬದುಕಿಸಿದ “ಧಾರವಾಡದ ಗಟ್ಟಿಗ”…
1 min readಧಾರವಾಡ: ಅಪಘಾತವೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹತ್ತಕ್ಕೂ ಹೆಚ್ಚು ಪ್ರಯಾಣಿಕರನ್ನ, ಜನರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸುವ ಮೂಲಕ ಧಾರವಾಡದ ಯುವಕನೋರ್ವ ಮಾನವೀಯತೆ ಮೆರೆದಿದ್ದಾರೆ.
ತೇಗೂರ ಬಳಿ ಕ್ರೂಸರ್ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ವಿಶಾಲಗಡಕ್ಕೆ ಹೋಗುತ್ತಿದ್ದ ಕುಟುಂಬಸ್ಥರು ತೀವ್ರವಾಗಿ ಗಾಯಗೊಂಡು ವಾಹನದಲ್ಲಿ ನರಳಾಡುತ್ತಿದ್ದರು. ಅದೇ ರಸ್ತೆಯಲ್ಲಿ ಧಾರವಾಡಕ್ಕೆ ಬರುತ್ತಿದ್ದ ರಾಯಲ್ ಕಿಚನ್ ಹೊಟೇಲ್ ಮಾಲೀಕ ಹಾಗೂ ಜೆಡಿಎಸ್ ಯುವ ಮುಖಂಡ ಅಲೀಂ ಎಂಬುವವರು, ಜನರ ಸಹಾಯ ಪಡೆದು ಎಲ್ಲರನ್ನೂ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಘಟನೆ ನಡೆದ ನಂತರ ದಾರಿ ಹೋಕರು ಪರಿಸ್ಥಿತಿಯ ಗಂಭೀರತೆ ಅರಿಯದೇ ವೀಡಿಯೋ ಮಾಡುತ್ತ ನಿಂತಿದ್ದರಂತೆ. ತಕ್ಷಣವೇ ಜಾಗೃತರಾದ ಅಲೀಂ ಅವರು, ಗಾಯಾಳುಗಳಿಗೆ ಅಪತ್ಪಾಂಧವರಾಗಿ ಎಲ್ಲರನ್ನೂ ಹೊರಗೆ ತೆಗೆದು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ನೂರಾರೂ ಜನರಿಗೆ ಎಲೆಮರೆ ಕಾಯಿಯಂತೆ ಸಹಾಯ ಮಾಡುತ್ತಲೇ ಬಂದಿರುವ ಅಲೀಂ ನಾಯ್ಕ ಅಂಥವರ ಸಂಖ್ಯೆ ಹೆಚ್ಚಾಗಲಿ.