Posts Slider

Karnataka Voice

Latest Kannada News

ಧಾರವಾಡದಲ್ಲಿ “ಬಹುದೊಡ್ಡ ರೇಡ್” ಮಾಡಿದ ಡಿವೈಎಸ್ಪಿ ಎಸಿಬಿ ಮಹಾಂತೇಶ ಜಿದ್ದಿ ತಂಡ…!

1 min read
Spread the love

ಧಾರವಾಡ: ಜಿಲ್ಲೆಯಲ್ಲಿಯೇ ನಡೆಯುತ್ತಿರುವ ಭ್ರಷ್ಟಾಚಾರ ಕೂಪಕ್ಕೆ ಕೈ ಹಾಕಿರುವ ಭ್ರಷ್ಟಾಚಾರ ನಿಗ್ರಹ ದಳದ ಪಡೆಯು ದಾಳಿಯನ್ನ ಮಾಡಿ, ಬಹುದೊಡ್ಡ ಪ್ರಕರಣವನ್ನ ಪತ್ತೆ ಹಚ್ಚಿ ಮೂವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

aee

ಧಾರವಾಡದ ವಿದ್ಯಾಗಿರಿಯ ಸತ್ತೂರ ಲೇ ಔಟ್ ನಲ್ಲಿ ದಾಳಿ ನಡೆದಿದ್ದು, ಲೋಕೋಪಯೋಗಿ ಇಲಾಖೆಯ ಎಇ ಪ್ರಶಾಂತ ಸತ್ತೂರ ಅವರ ಮನೆಯಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ಎಇಇ ಸಂಬಂಧಿಕನ ಸಮೇತ ಎಇಇ ಅವರನ್ನ ವಶಕ್ಕೆ ಪಡೆದುಕೊಂಡಿದ್ದಾರೆಎ.

ದಾಳಿಯಲ್ಲಿ ಎಇಇ ಎಸ್.ಎಸ್.ಮಂಜನಾಳ, ಎಇ ಪ್ರಶಾಂತ ಸತ್ತೂರ ಹಾಗೂ ಮಹಾಂತೇಶ ಮಂಜನಾಳರನ್ನ ಎಸಿಬಿ ಪಡೆ ವಶಕ್ಕೆ ಪಡೆದುಕೊಂಡಿದೆ.

ಮಾರ್ಚ್ ಹಣವನ್ನ ಎಇ ತನ್ನ ಮನೆಯಲ್ಲಿಟ್ಟುಕೊಂಡು ನಂತರ ಅದನ್ನ ಸಂಬಂಧಿಕರ ಮೂಲಕ ಎಇಇ ಮನೆಗೆ ಕಳಿಸಿಕೊಡುತ್ತಾರೆಂಬ ಮಾಹಿತಿಯ ಮೇರೆಗೆ ದಾಳಿ ನಡೆದಿದ್ದು, ಸಿಕ್ಕಿರುವ ಲಕ್ಷಾಂತರ ರೂಪಾಯಿ ಹಣದ ಮಾಹಿತಿ ಸಿಗಬೇಕಿದೆ.

ಡಿವೈಎಸ್ಪಿ ಮಹಾಂತೇಶ ಜಿದ್ದಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಅಲಿ ಶೇಖ ಸೇರಿದಂತೆ ಸಿಬ್ಬಂದಿಗಳು ಹಗರಣವನ್ನ ಪತ್ತೆ ಹಚ್ಚಿದ್ದು, ಮೂವರನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed