ಅವಶ್ಯಕ ವಸ್ತುಗಳ ತರಲು ಬೈಕ್ ಬಳಕೆ ಮಾಡಬಹುದು- ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಟ್ವೀಟ್…!

ಬೆಂಗಳೂರು: ದಿನನಿತ್ಯದ ವಸ್ತುಗಳ ಖರೀದಿಗಾಗಿಯೂ ಯಾವುದೇ ಕಾರಣಕ್ಕೆ ಬೈಕುಗಳನ್ನ ತೆಗೆದುಕೊಂಡು ಹೋಗಬಾರದೆಂದ ಸರಕಾರದ ನಿರ್ಧಾರಕ್ಕೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ನಾಳೆಯಿಂದ ಇಂದಿನ ರೂಲ್ಸ್ ನ್ನ ಕಡಿತಗೊಳಿಸಲಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಸಾವಿರಾರೂ ಬೈಕುಗಳನ್ನ ಜಪ್ತಿ ಮಾಡಲಾಗಿದೆ. ಹಲವು ಪ್ರದೇಶಗಳಲ್ಲಿ ಜನರು ಇದೇ ಕಾರಣಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಐದಾರು ಕಿಲೋಮೀಟರ್ ದೂರದಿಂದ ಬರುವುದು ಹೇಗೆ ಎಂದು ಜಗಳವಾಡಿದ್ದಾರೆ.
ಈ ಎಲ್ಲ ಘಟನಾವಳಿಗಳ ಬೆನ್ನಲ್ಲೇ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಅವರು, ಟ್ವೀಟ್ ಮಾಡುವ ಮೂಲಕ ದೊಡ್ಡದೊಂದು ರಿಲೀಫ್ ನೀಡಿದ್ದಾರೆ. ಆದರೆ, ಜನರು ಇದನ್ನ ದುರುಪಯೋಗ ಮಾಡಿಕೊಳ್ಳದಿರುವುದು ಒಳಿತು.