ದೇವೇಗೌಡರ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ-ಸಿಎಂ ಯಡಿಯೂರಪ್ಪ ಶುಭಾಶಯ

ಬೆಂಗಳೂರು: 88ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದ ಶುಭಾಶಯ ಕೋರಿ, ದೇವರು ದೇವೇಗೌಡರಿಗೆ ಆಯಸ್ಸು ಆರೋಗ್ಯ ನೀಡಲಿ ಎಂದು ಕೇಳಿಕೊಂಡಿದ್ದಾರೆ.
ಪ್ರಧಾನಿ ಹಾಗೂ ಯಡಿಯೂರಪ್ಪ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಯಾವುದೇ ಕಾರ್ಯಕರ್ತರು, ಮುಖಂಡರು ಮನೆಗೆ ಬಂದು ಶುಭಾಶಯ ತಿಳಿಸದೇ ಇದ್ದಲ್ಲಿಂದಲೇ ಶುಭಾಶಯ ತಿಳಿಸಿ ಎಂದು ಕೇಳಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಕಾರ್ಯಕರ್ತರು ತಮ್ಮ ತಮ್ಮ ಊರಿನಲ್ಲೇ ಗೌಡರಿಗೆ ಶುಭಾಶಯ ಕೋರಿ, ನೂರ್ಕಾಲ ಆರೋಗ್ಯದಿಂದ ಬದುಕಿ ರಾಜ್ಯದ ರಾಜಕೀಯದಲ್ಲಿರಿ ಎಂದು ಕೇಳಿಕೊಂಡಿದ್ದಾರೆ.