ದೇವಸ್ಥಾನ ತೆರೆಯಲು ಅವಕಾಶ: ಮಸೀದಿ-ಚರ್ಚ ತೆರೆಯಲು ಅವಕಾಶ ನೀಡದ ಸರಕಾರ
1 min readಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದು, ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲಕ ದೇವಸ್ಥಾನ ತೆರೆಯಲು ಅವಕಾಶ ಕೊಡಲು ಸಿಎಂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಮಸೀದಿ, ಚರ್ಚ್ಗಳ ಬಗ್ಗೆ ಇನ್ನೂ ನಿರ್ಧಾರ ಇಲ್ಲ ಮಾಡಿಲ್ಲ ಎಂದಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳನ್ನು ತೆರೆದು ಪೂಜಾ ಕೈಂಕರ್ಯಗಳಿಗೆ ಅವಕಾಶ ನೀಡಲಾಗಿದೆ. ಜೂನ್ 1 ರಿಂದ ದೇವಸ್ಥಾನಗಳು ಓಪನ್ ಆಗಲಿವೆ. ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳನ್ನು ತೆರೆದು ಪೂಜಾ ಕೈಂಕರ್ಯಗಳಿಗೆ ಅವಕಾಶ ಕೊಡಲಾಗಿದೆ ಎಂದು ಹೇಳಿದರು.
ಧಾರ್ಮಿಕ ದತ್ತಿ ಇಲಾಖೆಯಡಿ ಬರೋ ದೇವಸ್ಥಾನಗಳು ಓಪನ್ ಆಗಲಿವೆ. ಇದೇ 31 ರೊಳಗೆ ಅಗತ್ಯ ಸಿದ್ಧತೆ ಮಾಡಿಕೊಳ್ತೇವೆ. ಸಾಮಾಜಿಕ ಅಂತರ, ಮೂಲ ಸೌಕರ್ಯಗಳ ಸಿದ್ದತೆ ಮಾಡಿಕೊಳ್ತೇವೆ. ಬಹುತೇಕ ಸಡಿಲಿಕೆ ಕೊಟ್ಟಿರುವ ಹಿನ್ನಲೆಯಲ್ಲಿ ದೇವಸ್ಥಾನಗಳನ್ನು ತೆರೆಯಲು ಅವಕಾಶ ಕೊಡಲಾಗಿದೆ. ಈ ಬಗ್ಗೆ ಸಿಎಂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ದೇವಾಲಯಗಳಲ್ಲಿ ಎಲ್ಲ ಸೇವೆಗಳೂ ಇರಲಿವೆ. ಜಾತ್ರೆ, ಧಾರ್ಮಿಕ ಸಭೆಗಳಿಗೆ ಅವಕಾಶ ಇಲ್ಲ ಇಲ್ಲವೆಂದು ಮಾಹಿತಿ ನೀಡಿದರು.