ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರ: ಸರಕಾರದ ಹೊಸ ಮಾರ್ಗ ಸೂಚಿ ಬಿಡುಗಡೆ ಸಾಧ್ಯತೆ

ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯ ಸರ್ಕಾರದಿಂದ ಕೆಲವೊಂದು ಮಾರ್ಗಸೂಚಿ ಸಿದ್ದತೆ ನಡೆಯುತ್ತಿದೆ. ದೇವಸ್ಥಾನದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸರಕಾರ ಸಿದ್ದತೆ ಮಾಡಿಕೊಂಡಿದೆ.
ಇಂದು ಅಧಿಕೃತವಾಗಿ ಗೈಡ್‌ಲೈನ್ಸ್ ಪ್ರಕಟಗೊಳ್ಳುವ ಸಾಧ್ಯತೆ. ದೇವಸ್ಥಾನಗಳನ್ನು ಓಪನ್ ಮಾಡಿದ ಬಳಿಕ ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡುವುದು. ದೇವಸ್ಥಾನಗಳನ್ನು ಮುಚ್ಚುವಾಗಲು ಸ್ಯಾನಿಟೈಸರ್ ಮಾಡಿ ಬಾಗಿಲು ಬಂದ್ ಮಾಡುವುದು. ದೇವಸ್ಥಾನ ಆವರಣದಲ್ಲಿ ಶುಚಿತ್ವ ಕಾಪಾಡುವುದು. ಭಕ್ತರಿಗೆ ದೂರದಿಂದಲೇ ಮಂಗಳಾರತಿ ನೀಡುವುದು ಹಾಗೂ ದೇವಸ್ಥಾನಗಳಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಮೇಲುಸ್ತುವಾರಿಗೆ ನೋಡೆಲ್ ಅಧಿಕಾರಿ ನೇಮಕ ಮಾಡುವ ಸಾಧ್ಯತೆಯಿದೆ.