ಗುಡ್ಡದ ಮೇಲಿಂದ ಉರುಳಿದ ಕಲ್ಲಿನ ಗುಂಡು: ಇಬ್ಬರು ಬಾಲಕರು ದುರ್ಮರಣ
ರಾಯಚೂರು: ಗುಡ್ಡದ ಮೇಲಿನ ಕಲ್ಲಿನ ಗುಂಡು ಕೆಳಗೆ ಉರುಳಿದ ಪರಿಣಾಮ ಇಬ್ಬರು ಬಾಲಕರು ಸಾವಿಗೀಡಾದ ಘಟನೆ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.
ಸಂಜೆ ಸುರಿದ ಮಳೆಯಿಂದಾಗಿ ಗುಡ್ಡದ ಮೇಲಿನ ಮಣ್ಣು ಸಡಿಲಗೊಂಡಿತ್ತು. ಇದರಿಂದಾಗಿ ಬೃಹದಾಕಾರದ ಕಲ್ಲಿನ ಗುಂಡು ಕೆಳಕ್ಕುರಳಿ ವೀರೇಶ ಮತ್ತು ರಮೇಶ ಎಂಬ ಬಾಲಕರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.