ದೇಸಾಯಿ ಕ್ರಾಸ್ ಸೇತುವೆ ಸುರಂಗ ಮುಚ್ಚಿದ್ದಾರೆ- ಕಳಫೆ ಕಾಮಗಾರಿ ಮತ್ಯಾವಾಗ ಕೀಳತ್ತೋ.. ಏನೋ..!
ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಮ್ಮ ನಿವಾಸಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲೇ ನಿರ್ಮಾಣವಾಗಿರುವ ಸೇತುವೆಯಲ್ಲಿ ಸುರಂಗ ಬಿದ್ದಿರುವುದನ್ನ ಗಮನಕ್ಕೆ ತಂದಿದ್ದ, ಕರ್ನಾಟಕವಾಯ್ಸ್.ಕಾಂ ಗೆ ಗುತ್ತಿಗೆದಾರರು ರಸ್ತೆಗೆ ತೇಪೆ ಹಾಕುವ ಮೂಲಕ, ಸುರಂಗವನ್ನ ಮುಚ್ಚಿದ್ದಾರೆ.
ಧಾರವಾಡ ಸಮೀಪದ ನವಲೂರು ಸೇತುವೆ ಪದೇ ಪದೇ ಕುಸಿಯುತ್ತಿರುವ ಸಮಯದಲ್ಲೇ ದೇಸಾಯಿ ಕ್ರಾಸ್ ಬಳಿಯಿರುವ ಸೇತುವೆಯಲ್ಲೂ ಸುರಂಗ ಬಿದ್ದಿರುವುದನ್ನ ಗಮನಕ್ಕೆ ತರುವ ಪ್ರಯತ್ನವನ್ನ ಕರ್ನಾಟಕವಾಯ್ಸ್.ಕಾಂ ಮಾಡಿತ್ತು.
ಒಂದೇ ದಿನದಲ್ಲಿ ಎಚ್ಚೆತ್ತುಗೊಂಡಿರುವ ಗುತ್ತಿಗೆದಾರರು ತಾತ್ಕಾಲಿಕವಾಗಿ ತೇಪೆ ಹಾಕಿ ಸರಿ ಮಾಡುವ ಪ್ರಯತ್ನ ಮಾಡಿದ್ದಾರೆ. ಅಸಲಿಗೆ ಇದು ನಿಲ್ಲುವ ಸಮಸ್ಯೆಯಲ್ಲ. ಮತ್ತೆ ಮಳೆ ಬಂದರೇ, ಇಲ್ಲಿ ತಗ್ಗು ಬಿದ್ದು, ಮತ್ತದೇ ಸುರಂಗ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಳಫೆ ಮಟ್ಟದಲ್ಲಿ ಕಾಮಗಾರಿ ಮಾಡಿದಾಗ, ಇಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಸಂಬಂಧಿಸಿದವರು ಎಚ್ಚರಿಕೆ ಕೊಡುವುದು ಇಲ್ಲವೆಂದರೇ, ಸಾರ್ವಜನಿಕರ ಹಣ ಪೋಲಾಗುತ್ತಲೇ ಇರುತ್ತದೆ. ಇನ್ನೂ ಮುಂದಾದರೂ ತೊಂದರೆಯಾದರೇ, ಇಂತಹ ಗುತ್ತಿಗೆದಾರರ ಮೇಲೆ ಕಾನೂನು ಕ್ರಮವನ್ನ ಜರುಗಿಸಲು ಮುಂದಾಗುವುದು ಒಳಿತಲ್ಲವೇ..