Posts Slider

Karnataka Voice

Latest Kannada News

ಧಾರವಾಡ: ಡಿಸೆಂಬರ್‌ ಕಳ್ಳನನ್ನ “ಜಾಸೂಸಿ ಮಾಡಿ” ಮಾರ್ಚ್‌ಲ್ಲಿ ಬಂಧಿಸಿದ ಪೊಲೀಸರು…!!!

1 min read
Spread the love

ಧಾರವಾಡ: ನಗರದ ಮಹಾವೀರ ಕಾಲನಿಯ ಮನೆಯೊಂದರಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಳ್ಳತನವಾಗಿದ್ದ ಪ್ರಕರಣವನ್ನ ಪತ್ತೆ ಹಚ್ಚಿ ಆರೋಪಿಗಳನ್ನ ಬಂಧನ ಮಾಡುವಲ್ಲಿ ಧಾರವಾಡ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಾವೀರ ಕಾಲನಿಯ ಶೈಲಾ ಕುಂಬಾರ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳಿಗಾಗಿ ತನಿಖೆ ನಡೆದಿತ್ತು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನ ಬಂಧಿಸಿ ಅವರಿಂದ 100ಗ್ರಾಂ ಚಿನ್ನ ಹಾಗೂ 150 ಗ್ರಾಂ ಬೆಳ್ಳಿಯನ್ನ ವಶಕ್ಕೆ ಪಡೆಯಲಾಗಿದೆ.

ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ನೇತೃತ್ವದಲ್ಲಿ ಪಿಎಸ್ಐಗಳಾದ ಚಂದ್ರಶೇಖರ ಮದರಖಂಡಿ, ಸ್ವಾತಿ ಮುರಾರಿ ಸಿಬ್ಬಂದಿಗಳಾದ ಡಿ.ವಿ.ಘಾಳರೆಡ್ಡಿ, ಎಂ.ಬಿ.ಗದ್ದಿಕೇರಿ, ಎನ್.ಎಚ್.ಗುಡಿಮನಿ, ಜಿ.ಜಿ.ಚಿಕ್ಕಮಠ, ಆರ್.ಎಸ್.ಪಾಟೀಲ, ಟಿ.ಎಂ.ಮೇಗುಡಿ, ಎಸ್.ಎನ್.ಬಿರಾದಾರ, ಪಿ.ಎಸ್.ತೀರ್ಲಾಪುರ, ಶ್ರೀಧರ ವಡ್ಡರ್, ಎಂ.ಆರ್.ಜ್ಯಾಲಿ, ಎಂ.ಎಸ್.ಚಿಕ್ಕಮಠ, ಆರ್.ಕೆ.ಭಂಡಕರ, ಆರ್.ಎಸ್.ಗೋಮಪ್ಪನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *

You may have missed