ಸಾಲಗಾರರ ಕಾಟ: ಕೆರೆಗೆ ಹಾರವಾದ ಮಹಿಳೆ
1 min readಹುಬ್ಬಳ್ಳಿ: ಸಾಲಗಾರರ ಕಾಟವನ್ನ ತಾಳಲಾರದೇ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯ ಬುದ್ನಾಳ ಕೆರೆಗೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಮಲ್ಲವ್ವ ಶಂಕರ ಸುಣಗಾರ ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಕಿರು ಪೈನಾನ್ಸ್ ಮಾಡಿಕೊಂಡಿದ್ದ ಮಲ್ಲವ್ವಳಿಗೆ ಸಾಲಗಾರರ ಕಾಟ ಹೆಚ್ಚಾಗಿಯೇ ಸಾವಿಗೀಡಾಗಿದ್ದಾಳೆಂದು ಹೇಳಲಾಗಿದೆ.
ಮಲ್ಲವ್ವ ಸಾಲಗಾರರ ಕಾಟದ ಜೊತೆಗೆ ಸಂಸಾರ ಕಲಹದಿಂದಲೂ ಬೇಸತ್ತಿದ್ದರೆಂದು ಹೇಳಲಾಗಿದೆ. ಈ ಕಾರಣದಿಂದಲೂ ಸಾವಿಗೆ ಶರಣಾಗಿರಬಹುದೆಂದು ಹೇಳಲಾಗಿದ್ದು, ಕೆರೆಯಲ್ಲಿ ಶವ ಮೇಲೆ ಬಂದಾಗ ಸ್ಥಳೀಯರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿಯನ್ನು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ, ಶವವನ್ನ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆಯ ಕುರಿತು ಪ್ರಕರಣವನ್ನೂ ದಾಖಲು ಮಾಡಿಕೊಂಡಿರುವ ಪೊಲೀಸರು, ಸಾಲಗಾರರ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.