‘ಮಿಂಚಿನ ಓಟ’ ಕೆರೆಗೆ ಬಿದ್ದ ವರದನಾಯಕ- ಮರಳಿ ಬಾರದ ಲೋಕಕ್ಕೆ…

ಹಾವೇರಿ: ತನ್ನೋಟದಿಂದಲೇ ಜನರ ಮನ ಗೆದ್ದಿದ್ದ ವರದನಾಯಕ ಮಿಂಚಿನ ಓಟದಲ್ಲೇ ಕೆರೆಗೆ ಹಾರಿ, ಈಜಿ ದಡ ಸೇರದ ಪ್ರಾಣವನ್ನ ಕಳೆದುಕೊಂಡು ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದಲ್ಲಿ ಸಂಭವಿಸಿದೆ.
ಹೋರಿ ಪ್ರಾಣ ಕಳೆದುಕೊಂಡಿದ್ದು ಹೇಗೆ.. ಇಲ್ಲಿದೆ ನೋಡಿ ವೀಡಿಯೋ
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವರದನಾಯಕ ಹೆಸರಿನ ಕೊಬ್ಬರಿ ಹೋರಿ. ಓಡುವ ರಭಸದಲ್ಲಿ ಕೆರೆಗೆ ಹಾರಿ ಪ್ರಾಣವನ್ನ ಕಳೆದುಕೊಂಡಿದ್ದು, ಸಾರ್ವಜನಿಕರು ಮಮ್ಮುಲ ಮರುಗುವಂತಾಗಿದೆ.
ಪ್ರಾಣವನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟ ಹೋರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಣ್ಣುಮುಂದೆ ತಮ್ಮ ನೆಚ್ಚಿನ ಹೋರಿಯನ್ನು ಕಳೆದುಕೊಂಡು ಜನರು ದುಃಖದ ಮಡುವಿನಲ್ಲಿದ್ದಾರೆ.