ಕಲಿಕೆ ಸಮಯದಲ್ಲೇ ಕುಸಿದು ಬಿದ್ದು ಸರಕಾರಿ ಶಾಲೆ ಶಿಕ್ಷಕಿ ದುರ್ಮರಣ…!

ಆಂದ್ರಪ್ರದೇಶ: ಬಿರು ಬಿಸಿಲಿನ ನಡುವೆಯೇ ಶಿಕ್ಷಣ ನೀಡುತ್ತಿದ್ದ ಶಿಕ್ಷಕಿಯೋರ್ವರು ತರಗತಿಯಲ್ಲಿಯೇ ಕುಸಿದು ಬಿದ್ದು ಪ್ರಾಣವನ್ನ ಕಳೆದುಕೊಂಡ ಘಟನೆ ಕೃಷ್ಣಂ ಜಿಲ್ಲೆಯ ಪೆದ್ದಪಾರುಡಿ ಮಂಡಲದ ಚಿನ್ನಪಾರು ಪುಡಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಮಕ್ಕಳಿಗೆ ಪಾಠದ ವಿವರಣೆ ಕೊಡುತ್ತಿದ್ದ ವೇಳೆಯಲ್ಲಿಯೇ ಕುಸಿದು ಬಿದ್ದ ಮಾಸಿಮುಕ್ಕು ಶ್ರೀದೇವಿ ಎಂಬ ಶಿಕ್ಷಕಿಯನ್ನ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಸಾವಿಗೀಡಾಗಿದ್ದಾರೆ.

ಶಿಕ್ಷಕಿಯ ಸಾವಿಗೆ ಹೃದಯಾಘಾತವೇ ಕಾರಣವೆಂದು ಹೇಳಲಾಗಿದ್ದು, ಘಟನೆಯಿಂದ ಶಾಲೆ ಹಾಗೂ ಗ್ರಾಮದಲ್ಲಿ ನಿರವಮೌನ ಆವರಿಸಿದೆ. ಉತ್ತಮ ಶೈಕ್ಷಣಿಕ ತರಗತಿಗಳನ್ನ ನಡೆಸುತ್ತಿದ್ದ 54 ವಯಸ್ಸಿನ ಶಿಕ್ಷಕಿಯ ಸಾವು, ಶಿಕ್ಷಕ ವಲಯದಲ್ಲಿ ಆತಂಕ ಮೂಡಿಸಿದೆ.
ರಾಜ್ಯದಲ್ಲಿಯೂ ಅತಿಯಾದ ಬಿಸಿಲು ಆರಂಭಗೊಂಡಿದ್ದು, ಶಿಕ್ಷಕ ಸಮುದಾಯ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ಕೊಡಬೇಕಿದೆ. ವಿನಾಕಾರಣ ಊಟ ಮಾಡದೇ ಇರುವುದು, ಹೆಚ್ಚು ನೀರನ್ನ ಸೇವಿಸದೇ ಇರುವುದು ಕೂಡಾ, ತೊಂದರೆಗೆ ಕಾರಣವಾಗುವ ಸಾಧ್ಯತೆಯಿದೆ.