ಬಿಡನಾಳದ ಬಳಿ ವಿದ್ಯುತ್ ಶಾಕ್: ಮಿಶ್ರಿಕೋಟಿ ಯುವಕ ದುರ್ಮರಣ…!
1 min readಹುಬ್ಬಳ್ಳಿ: ಮನೆ ನಿರ್ಮಾಣ ಕೆಲಸಕ್ಕಾಗಿ ಬಂದಿದ್ದ ಯುವಕನೋರ್ವ ನೀರಿನ ಮೋಟರ್ ಆರಂಭಿಸಲು ಹೋದಾಗ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಬಿಡನಾಳದಲ್ಲಿ ನಡೆದಿದೆ.
ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಸಿದ್ಧಾರೂಢ ಭೋವಿ ಎಂಬ ಯುವಕನೇ ಸಾವಿಗೀಡಾಗಿದ್ದಾನೆ. ಬಿಡನಾಳ ಗ್ರಾಮದಲ್ಲಿ ಮನೆ ಕಟ್ಟುವ ಕಾಮಗಾರಿಗಾಗಿ ಮೇಸ್ತ್ರಿಯೊಂದಿಗೆ ಆಗಮಿಸಿದ್ದ ಯುವಕ, ನೀರಿಗಾಗಿ ಮೋಟಾರ ಆರಂಭಿಸಲು ಹೋಗಿದ್ದಾನೆ. ಅದೇ ಸಮಯದಲ್ಲಿ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
19 ವರ್ಷದ ಯುವಕ ಜೀವನ ನಡೆಸಲು ದುಡಿಯುವುದಕ್ಕಾಗಿ ಬಂದಾಗ ದುರ್ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದ ಹಾಗೇ ಶವವನ್ನ ಹುಬ್ಬಳ್ಳಿಯ ಕಿಮ್ಸನ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಬೆಂಡಿಗೇರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.