ಸರಕಾರದ ಆದೇಶ ಪಾಲನೆ ಮಾಡುವಾಗಲೇ ಸಂಯುಕ್ತ ಕರ್ನಾಟಕ ವರದಿಗಾರ ಸಾವು: ಡಿಟೇಲ್ಸ್ ಇದೆ ನೋಡಿ
ತುಮಕೂರು: ಕೊರೋನಾ ವೈರಸ್ ಸಂಬಂಧ ಸರಕಾರದ ಆದೇಶ ಪಾಲಿಸಲು ಮನೆಯಲ್ಲಿಯೇ ನಮಾಜ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಸಾವನ್ನಪ್ಪಿದ್ದಾರೆ.
ಕಳೆದ 15 ವರ್ಷಗಳಿಂದ ಕುಣಿಗಲ್ ತಾಲೂಕು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಫಯಾಜ ಉಲ್ಲಾಖಾನ್ ಮೃತಪಟ್ಟ ದುರ್ದೈನಿಯಾಗಿದ್ದಾರೆ. ಬಕ್ರೀದ್ ನಿಮಿತ್ತವಾಗಿ ಮನೆಯಲ್ಲಿಯೇ ಪ್ರಾರ್ಥನೆ ಮಾಡುತ್ತಿದ್ದ ವೇಳೆ ಹಾರ್ಟ್ ಅಟ್ಯಾಕ್ ಆಗಿದೆ.
ಇದೇ ಸಮಯದಲ್ಲಿ ಮನೆಯವರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಕ್ರೀದ್ ದಿನವೇ ಸಾವಿಗೀಡಾದ ಪತ್ರಕರ್ತನ ಕುಟುಂಬಕ್ಕೆ ಜಿಲ್ಲಾ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.