ಮೊರಬದಲ್ಲಿ ತಾಯಿ-ಮಕ್ಕಳ ಸಾವು- ಇಬ್ಬರ ಬಂಧನ: ಎಸ್ಪಿ ಬ್ಯಾಕೋಡ್ ಹೇಳಿಕೆ…

ತಾಯಿ, ಮಕ್ಕಳ ಸಾವು ಪ್ರಕರಣ; ಗಂಡ, ಅತ್ತೆ ಹಾಗೂ ಮಾವನ ಮೇಲೆ ಎಫ್‌ಐಆರ್
ನವಲಗುಂದ: ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದ ತಾಯಿ, ಮಕ್ಕಳ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೊರಬ ಗ್ರಾಮದ ಸಾವಿತ್ರಿ ಸರಕಾರ ಎಂಬ ಮಹಿಳೆ ತನ್ನ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹತ್ಯೆ ಮಾಡಿ ಕೊನೆಗೆ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿತ್ರಿಯ ಗಂಡ, ಅತ್ತೆ ಹಾಗೂ ಮಾವನ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ತಿಳಿಸಿದ್ದಾರೆ.