ನವಲಗುಂದ: ಗೆಳತನಕ್ಕಾಗಿ ಹೋದವನು “ಹೆಣವಾಗಿ” ಸಿಕ್ಕ…

ನವಲಗುಂದ: ಗೆಳೆಯನೊಂದಿಗೆ ಈಜಲು ಹೋಗಿ ಕೆರೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಘಟನೆ ತಾಲೂಕಿನ ಹಾಳಕುಸುಗಲ್ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಇಂದು ಆತ ಶವವಾಗಿ ದೊರಕಿದ್ದಾನೆ.
ಕೆರೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಯುವಕರು ಕೆರೆಯಲ್ಲಿ ಮುಳುಗಿರುವುದನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅಣ್ಣಿಗೇರಿ ಅಗ್ನಿಶಾಮಕದಳ ಭೇಟಿ ನೀಡಿ ತಡರಾತ್ರಿವರೆಗೂ ಪರಿಶೀಲನೆ ನಡೆಸಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.
ಮೃತದೇಹ ಸಿಗದ ಕಾರಣ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಮೊಕ್ಕಾಂ ಹೂಡಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇಳಿಸಂಜೆ ಮೃತದೇಹ ದೊರಕಿದೆ.
ಮೃತ ಯುವಕನನ್ನ ದಾವಲಸಾಬ ಮಕ್ತುಂಸಾಬ ಹೆಬಸೂರ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಪಿಎಸ್ ಐ ಜನಾರ್ದನ್ ಭಟ್ರಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.