ಲಿಂಗರಾಜನಗರದಲ್ಲಿ ಕಂಪೌಂಡ ಕುಸಿದು ಬಂಡಿವಾಡ-ಮಂಟೂರ ಕಾರ್ಮಿಕನ ದುರ್ಮರಣ…!

ಹುಬ್ಬಳ್ಳಿ: ನೂತನ ಮನೆ ಕಟ್ಟಲು ಬುನಾದಿ ತೆಗೆಯುತ್ತಿದ್ದ ವೇಳೆಯಲ್ಲಿ ಕಂಪೌಂಡ ಕುಸಿದು ಕಾರ್ಮಿಕನೋರ್ವ ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ನಡೆದಿದೆ.
ಲಿಂಗರಾಜನಗರದಲ್ಲಿ ಮನೆ ಕಟ್ಟಲು ಪಾಯವನ್ನು ಕಡೆಯುವ ಸಂದರ್ಭದಲ್ಲಿ ಪಕ್ಕದ ಮನೆಯ ಕಂಪೌಂಡ್ ಒಂದು ಕುಸಿದು ಕಾರ್ಮಿಕನಾದ ಈರಪ್ಪ ಸಂಕನಗೌಡ್ರ ಮೇಲೆ ಬಿದ್ದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಕಿಮ್ಸಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಮನೆಯ ಪಾಯಾ ತೆಗೆಯಲು ಬಂದಿದ್ದ ಬಂಡಿವಾಡ-ಮಂಟೂರ ಗ್ರಾಮದಿಂದ ಬಂದಿದ್ದ ಈರಪ್ಪ ಸಂಕನಗೌಡ್ರ, ಪಕ್ಕದ ಕಂಪೌಂಡ ಕುಸಿಯುವದನ್ನ ನೋಡದೇ ಇದ್ದಿದ್ದರಿಂದ ದುರ್ಘಟನೆ ನಡೆದಿದೆ.
ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕಿಮ್ಸನ ಶವಾಗಾರಕ್ಕೆ ಶವವನ್ನ ರವಾನೆ ಮಾಡಿದ್ದಾರೆ.