ಪ್ರೂಟ್ ಕೊಲೆಗೆ ರಾಜಕಾರಣಿ ಸಂಚು- ಜೊತೆಗಿದ್ದವರು ಹೇಳಿದ್ದೇನು…? ವೀಡಿಯೋ ಇದೆ…
ಹುಬ್ಬಳ್ಳಿ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಯುವಕ ಇರ್ಫಾನ್ ಧಾರವಾಡಕ್ಕೆ ಬಂದು ಫ್ರೂಟ್ ಇರ್ಫಾನ್ ಆಗಿದ್ದು, ಇಂದು ಆತನ ಅಂತ್ಯವಾಗಿದೆ. ಆದರೆ, ಈ ಅಂತ್ಯಕ್ಕೆ ಕಾರಣವಾಗಿದ್ದು ರಾಜಕಾರಣಿ ಎಂಬ ಸಂಶಯ ಹೊರಬಿದ್ದಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮದುವೆ ಸಭಾಂಗಣದ ಮುಂಭಾಗ ಕೊಲೆಯಾದ ಇರ್ಫಾನ್ ಜೊತೆಗಿದ್ದ ಆತನ ಗೆಳೆಯ ಹೇಳುವ ಪ್ರಕಾರ ಇದರ ಹಿಂದೆ ರಾಜಕಾರಣಿ ಇದ್ದಾರೆಂದು.
ತನ್ನ ಮಗನ ಮದುವೆ ಮುಗಿಸಿದ ಸಂಭ್ರಮದಲ್ಲಿದ್ದ ಪ್ರೂಟ್ ಇರ್ಫಾನನ ಜೊತೆಗಿದ್ದ ಆತ್ಮೀಯ ಹೇಳುವ ಪ್ರಕಾರ, ಈ ಹತ್ಯೆಯ ಹಿಂದೆ ರಾಜಕಾರಣಿ ಕೈವಾಡವಿದೆ. ಇದನ್ನ ಪೊಲೀಸರು ಭೇದಿಸುತ್ತಾರೆಂಬ ಭರವಸೆಯಿದೆ ಅಂತಾರೆ.
ಯಾವ ರಾಜಕಾರಣಿ ಮತ್ತೂ ಯಾವ ಪಕ್ಷದ ರಾಜಕಾರಣಿ ಎಂದು ಕೇಳಿದ್ರೇ ಅದಕ್ಕೆ ಮಾರ್ಮಿಕವಾದ ಉತ್ತರವನ್ನ ಕೊಡಲಿಲ್ಲ. ಇರ್ಫಾನ್ ಹತ್ಯೆಯ ಹಿಂದೆ ಪ್ರಮುಖವಾದ ಕಾರಣವನ್ನ ಹುಡುಕಬೇಕಿದೆ ಮತ್ತೂ ಅದನ್ನ ಪೊಲೀಸರು ಮಾಡುತ್ತಾರೆ ಅಂತಾರೆ ಪ್ರೂಟ್ ಇರ್ಫಾನ್ ಗೆಳೆಯ.
ಆತ ಮಾತನಾಡಿರುವ ವೀಡಿಯೋದ ಲಿಂಕ್ ಕೂಡಾ ಇಲ್ಲಿದೆ ನೋಡಿ…