ಲಾಕ್ ಡೌನ್: ಪತ್ನಿ ನೋಡಲು ಹೋದ ಕಂಡಕ್ಟರ್ ನೀರಲ್ಲಿ ಮುಳಗಿ ಸಾವು

ಮುದ್ದೇಬಿಹಾಳ: ತವರು ಮನೆಗೆ ಹೋಗಿದ್ದ ಪತ್ನಿಯನ್ನ ನೋಡಿ ತಮ್ಮೂರಿಗೆ ಮರಳಲು ಮಾರ್ಗವಿಲ್ಲದೇ ಈಜಿ ದಡ ಸೇರಲು ಆಗದೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಹುನಗುಂದ ತಾಲೂಕಿನ ಹುಲ್ಲಳ್ಳಿ ಗ್ರಾಮದ ಮಲ್ಲಪ್ಪ ನಿಂಗಪ್ಪ ಬೊಮ್ಮಣಗಿ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿಯನ್ನ ನೋಡುವ ಸಲುವಾಗಿ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ಎಲ್ಲ ಮಾರ್ಗಗಳು ಬಂದಾಗಿದ್ದವು. ಆ ಕಾರಣಕ್ಕೆ ಕೃಷ್ಣಾ ನದಿಯಲ್ಲಿ ಈಜಿ ದಡ ಸೇರುವ ಮುನ್ನವೇ ಕೈ ಸೋತು ನೀರಲ್ಲೇ ಮುಳಗಿ ಸಾವನ್ನಪ್ಪಿದ್ದಾರೆ.