ಹುಬ್ಬಳ್ಳಿಯಲ್ಲಿ ಮಣ್ಣು ಕುಸಿದು ಯಲಿವಾಳ ಗ್ರಾಮದ ಯುವಕ ದುರ್ಮರಣ…!

ಹುಬ್ಬಳ್ಳಿ: ನಗರದ ಕೊಪ್ಪಿಕರ ರಸ್ತೆಯ ಬಳಿಯಲ್ಲಿ ಪೈಪ್ ಲೈನ್ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಮಣ್ಣು ಕುಸಿದು ಸಾವಿಗೀಡಾದ ಘಟನೆ ನಡೆದಿದೆ.

ರವಿ ತಾಳಿಕೋಟೆ ಎಂಬ ಗುತ್ತಿಗೆದಾರ ನಡೆಸುತ್ತಿರುವ ಕಾಮಗಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುಂದಗೋಳ ತಾಲೂಕು ಯಲಿವಾಳ ಗ್ರಾಮದ ರವಿ ಯಲಿವಾಳ ಎಂಬಾತನ ಮೇಲೆ ತೀವ್ರವಾದ ಮಣ್ಣು ಕುಸಿದು ಬಿದ್ದಿದೆ. ಇದರಿಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ.

ಪೈಪ್ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಸುಮಾರು ಎಂಟು ಅಡಿಗೂ ಹೆಚ್ಚು ಕೆಳಗೆ ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದಿದೆ. ಆದರೂ, ಪಕ್ಕದಲ್ಲಿರುವ ಅಂಜುಮನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಲಾಗಿತ್ತಾದರೂ, ಅಲ್ಲಿಗೆ ಹೋಗುವ ಮುನ್ನವೇ ಕಾರ್ಮಿಕ ಸಾವಿಗೀಡಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿಯ ಶಹರ ಠಾಣೆಯ ಪೊಲೀಸರು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸಗೆ ರವಾನೆ ಮಾಡಿದ್ದಾರೆ.