Posts Slider

Karnataka Voice

Latest Kannada News

ಸಚಿವ ಜೋಶಿ ಮನೆ ಎದುರು ವಿಷಸೇವಿಸಿದ್ದ ಮಹಿಳೆ ಸಾವು…!

1 min read
Spread the love

ಹುಬ್ಬಳ್ಳಿ: ಮಳೆಯಿಂದ ಬಿದ್ದ ಮನೆ ಕಟ್ಟಲು ಹೆಚ್ಚು ಹಣವನ್ನ ಬಿಡುಗಡೆ ಮಾಡಬೇಕೆಂದು ಆರು ತಿಂಗಳು ತಿರುಗಾಡಿದ್ದ ಮಹಿಳೆಯೋರ್ವಳು ಕಳೆದ ಮೂರು ದಿನಗಳ ಹಿಂದೆ ಸಂಸದ ಪ್ರಲ್ಹಾದ ಜೋಶಿಯವರ ಮನೆ ಎದುರು ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ.

ಶ್ರೀದೇವಿ ವೀರಣ್ಣ ಕಮ್ಮಾರ ಎಂಬುವವರೇ ಕಳೆದ ಮೂರು ದಿನದ ಹಿಂದೆಯೂ ಸಂಸದ ಪ್ರಲ್ಹಾದ ಜೋಶಿಯವರ ಮನೆಗೆ ಬಂದು ಬೇಡಿಕೊಂಡು ಅಲ್ಲಿಯೇ ವಿಷವನ್ನ ಸೇವನೆ ಮಾಡಿದ್ದರು. ಅಷ್ಟೇ ಅಲ್ಲ, ಶಾಸಕ ಅಮೃತ ದೇಸಾಯಿ ಮನೆಗೆ ಹೋಗಿದ್ದನ್ನ ತಾವು ಬರೆದಿದ್ದ ಪತ್ರದಲ್ಲಿ ನಮೂದು ಮಾಡಿಕೊಂಡೇ ವಿಷವನ್ನ ಸೇವನೆ ಮಾಡಿದ್ದರು.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆಯನ್ನ ತಕ್ಷಣವೇ ಕಿಮ್ಸಗೆ ರವಾನೆ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಮಹಿಳೆಯ ಗಂಡ ಲಕ್ವಾದಿಂದ ನರಳುತ್ತಿದ್ದು, ಇಬ್ಬರು ಮಕ್ಕಳನ್ನ ಅಗಲಿದ್ದಾರೆ.

ಮಳೆಗಾಲದಲ್ಲಿ ಮನೆ ಬಿದ್ದಾಗ, ಮನೆಯನ್ನ ಸಿ ಕೆಟಗೇರಿಗೆ ಹಾಕಿ 50 ಸಾವಿರ ರೂಪಾಯಿಯನ್ನೂ ಕೊಡಲಾಗಿತ್ತು. ಆದರೆ, ಅದು ಸಾಕಾಗದೇ ಇದ್ದಿದ್ದರಿಂದ ಆತು ತಿಂಗಳಿಂದ ಶಾಸಕ, ಸಂಸದರ ಮನೆಗೆ ಅಲೆದಾಡಿದ್ದೆ ಎಂಬುದನ್ನ ಡೆತ್ ನೋಟಲ್ಲಿ ಬರೆದಿಟ್ಟಿದ್ದರು. ಇದೀಗ ಆ ಮಹಿಳೆ ಮೃತಪಟ್ಟಿದ್ದು, ಲಕ್ವಾ ಹೊಡೆದ ಗಂಡ, ಇಬ್ಬರು ಮಕ್ಕಳ ಸ್ಥಿತಿ..


Spread the love

Leave a Reply

Your email address will not be published. Required fields are marked *

You may have missed