ಚೆಂದದ ಗೃಹಿಣಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದೇಕೆ… ರಾಣೆಬೆನ್ನೂರು ಏನಂತಿದೆ…
ಹಾವೇರಿ: ಆಕೆ ದಿನನಿತ್ಯ ಮನೆಯವರೊಂದಿಗೆ ನಗು ನಗುತ್ತಲೇ ಜೀವನ ನಡೆಸುತ್ತಿದ್ದಳು. ಆದರೆ, ಆಕೆ ಅವತ್ತು ಸಾಯಬಾರದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದಾಳೆ. ಹಾಗಾಗಿಯೇ ಈ ಪ್ರಕರಣ ಮತ್ತೊಂದು ರೀತಿಯಲ್ಲಿ ಗೊಂದಲ ಸೃಷ್ಟಿಸಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಾಳನಾಯಕನಹಳ್ಳಿ ಗ್ರಾಮದ ದೀಪಾ ಎಂಬ ಮಹಿಳೆಯೇ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಪ್ರಕರಣ ಕಳೆದ ಮೂರು ದಿನದ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಈ ಬಗ್ಗೆ ದೀಪಾಳ ಸಂಬಂಧಿಕರು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಸಾವು ಅಸಹಜವಾಗಿದೆ ಎಂದು ದೂರಿದ್ದಾರೆ.
