ಮಾಳಿಗೆ ಬಿದ್ದು ವೃದ್ಧ ದುರ್ಮರಣ: ಹಾಯಾಗಿ ಮಲಗಿದ್ದವನ ಮೇಲೆ ಬಿದ್ದ ಮಾಳಿಗೆ
ಚಿಕ್ಕೋಡಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಈ ಭಾಗದಲ್ಲಿ ಮೊದಲ ಸಾವಾಗಿದ್ದು, ಮನೆಯಲ್ಲಿ ಹಾಯಾಗಿ ಮಲಗಿದಾಗ ಮಾಳಿಗೆ ಬಿದ್ದು ವೃದ್ಧರೋರ್ವರು ಮೃತಪಟ್ಟಿದ್ದಾರೆ.
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಕಲ್ಲಪ್ಪಾ ಪರಗೌಡರ ಮನೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಕಳೆದ ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದ ಮಣ್ಣಿನ ಮನೆಗಳು ತಂಪಾಗಿ ಇಂತಹ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಪಕ್ಕದ ಮನೆಯವರು ಬಿದ್ದ ಮನೆಯನ್ನ ನೋಡಲು ಹೋದಾಗ ವೃದ್ಧ ಕಲ್ಲಪ್ಪ ಮೃತಪಟ್ಟಿದ್ದು ತಿಳಿದಿದೆ. ತಕ್ಷಣವೇ ಮಣ್ಣಿನಲ್ಲಿ ಸಿಕ್ಕಿಕೊಂಡಿದ್ದ ಕಲ್ಲಪ್ಪನವರ ಶವವನ್ನ ಹೊರಗೆ ತೆಗೆಯಲಾಗಿದೆ.
ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ ಸುಭಾಷ ಸಂಪಗಾವಿ ಭೇಟಿ ನೀಡಿ, ಮೃತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.