ಹೆಬ್ಬಳ್ಳಿಯ ಯುವಕ ಮಾರಡಗಿಯಲ್ಲಿ ಸಾವು

ಧಾರವಾಡ: ಮೀನು ಹಿಡಿಯಲು ಬಂದಿದ್ದ ಯುವಕನೋರ್ವ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಮೂರು ದಿನದ ನಂತರ ಬೆಳಕಿಗೆ ಬಂದ ಘಟನೆ ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ಬಯಲಿಗೆ ಬಂದಿದೆ.
ಹೆಬ್ಬಳ್ಳಿ ಗ್ರಾಮದ ಬುಧವಾರ ಪೇಟೆ ನಿವಾಸಿಯಾಗಿರುವ ಬಸವರಾಜ ಈರಪ್ಪ ಹಡಪದ ಎಂಬಾತನ ಶವವೇ, ಮಾರಡಗಿ ಗ್ರಾಮದ ಹನಮಂತ ದೇವಸ್ಥಾನದ ಹಿಂಭಾಗದಲ್ಲಿ ತೇಲುತ್ತಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.
ಬಸವರಾಜ ಹಲವು ದಿನಗಳಿಂದ ಈ ಕೆರೆಗೆ ಬಂದು ಮೀನು ಹಿಡಿದು ಹೆಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದ. ತಾನೂ ಮಾತ್ರ ಎಂದು ಮೀನನ್ನ ಸೇವಿಸಿರಲಿಲ್ಲ.
ಮೂರು ದಿನದಿಂದಲೂ ಮನೆಗೆ ಬಂದಿಲ್ಲ ಎಂದು ಹೆಬ್ಬಳ್ಳಿಯಲ್ಲಿನ ಬಸವರಾಜ ಸಂಬಂಧಿಕರು ಹುಡುಕಾಟ ನಡೆಸಿದ್ದರಾದರೂ, ಎಲ್ಲಿಯೂ ಆತನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಈಗ ಕೆರೆಯಲ್ಲಿ ಶವ ಸಿಕ್ಕಿದೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸುತ್ತಿದ್ದಾರೆ.