ಎಗ್ ರೈಸ್ ಮಾಲೀಕನನ್ನ ‘ದುಗುಸಿ’ ಕೊಂದ ಮೌನೇಶ ನಾಪತ್ತೆ
1 min readಹುಬ್ಬಳ್ಳಿ: ತನ್ನ ಉಪಜೀವನಕ್ಕಾಗಿ ಎಗ್ ರೈಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ದೂಡಿ ಗಾಯಗೊಳಿಸಿದ್ದ ದಗಾಕೋರನೋರ್ವ ಪರಾರಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಹುಬ್ಬಳ್ಳಿ ಶಹರ ಠಾಣೆ ವ್ಯಾಪ್ತಿಯಲ್ಲಿ ಎಗರೈಸ್ ಮಾಡುತ್ತ ಗ್ಯಾಸ್ ರಿಪೇರಿಯನ್ನ ಮಾಡುತ್ತಿದ್ದ ಇಲಿಯಾಸ್ ಎಂಬ ವ್ಯಕ್ತಿಯೇ ಸಾವಿಗೀಡಾಗಿದ್ದು, ಕಳೆದ ಮೂರು ದಿನದ ಹಿಂದೆ, ಶಹರ ಠಾಣೆ ವ್ಯಾಪ್ತಿಯಲ್ಲಿ ದರೋಡೆಕೋರ ಮೌನೇಶ ಎಂಬಾತ, ಮಾತಿಗೆ ಮಾತು ಬೆಳೆಸಿ, ದೂಡಿ ಪರಾರಿಯಾಗಿದ್ದ.
ಜೋರಾಗಿ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಇಲಿಯಾಸನನ್ನ ಕಿಮ್ಸಗೆ ರವಾನೆ ಮಾಡಲಾಗಿತ್ತು. ಅಂದಿನಿಂದಲೇ ಕೋಮಾದಲ್ಲಿದ್ದ ವ್ಯಕ್ತಿ ಇಂದು ಬೆಳಿಗ್ಗೆ ಸಾವಿಗೀಡಾಗಿದ್ದು, ಶವವನ್ನ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಶಹರ ಠಾಣೆಯ ಪೊಲೀಸರು, ಆರೋಪಿಯನ್ನ ಬಂಧಿಸಲು ಹುಡುಕಾಟ ನಡೆಸಿದ್ದು, ಮೌನೇಶ ಕೈಗೆ ಸಿಗದೇ ತಪ್ಪಿಸಿಕೊಂಡು ಅಲೆದಾಡುತ್ತಿದ್ದಾನೆಂದು ಹೇಳಲಾಗಿದೆ.