ನಟ ಸಂತೋಷ್ ಬಾಲರಾಜ ವಿಧಿವಶ.. ಚಿತ್ರನಿರ್ಮಾಪಕ ದಿವಂಗತ ಆನೇಕಲ್ ಬಾಲರಾಜ್ ಪುತ್ರ…

ಚಿತ್ರನಿರ್ಮಾಪಕ ದಿವಂಗತ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ಇಂದು (ಆಗಸ್ಟ್ 5) ಬೆಳಿಗ್ಗೆ 10 ಗಂಟೆಗೆ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಂತೋಷ್ ಕಳೆದ ತಿಂಗಳು ಜಾಂಡೀಸ್‌ಗೆ ಚಿಕಿತ್ಸೆ ಪಡೆದಿದ್ದರು. ಆದರೆ ಮೊನ್ನೆಯಷ್ಟೇ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ಕುಮಾರಸ್ವಾಮಿ ಲೇ ಔಟ್‌ನ ಸಾಗರ್ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಬಾಲರಾಜ್ ಉಸಿರು ಚೆಲ್ಲಿದ್ದಾರೆ.
ಗಣಪ, ಕರಿಯ – 2, ಕೆಂಪ, ಬರ್ಕ್ಲೀ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್ ಅಭಿನಯದ ‘ಸತ್ಯ’ ಚಿತ್ರ ಇನ್ನೂ ರಿಲೀಸಾಗಬೇಕಿತ್ತು. ಎಲ್ಲರ ಜತೆ ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಸಂತೋಷ್ ಒಂದೂವರೆ ವರ್ಷದ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದರು. ಇನ್ನೂ 38 ಹರೆಯದ ಸಂತೋಷ್ ಬಾಲರಾಜ್ ಸದ್ಯದಲ್ಲೇ ಮದುವೆಯಾಗುವ ಸಿದ್ದತೆಯನ್ನೂ ನಡೆಸಿದ್ದರು. ತಾಯಿ, ತಂಗಿಯನ್ನು ಅಗಲಿ ಸಂತೋಷ್ ಈಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.