ಹೆಣ ಬಿದ್ದು ಗಂಟೆಗಟ್ಟಲೇ ಕಾಯ್ದರೂ “ಕೇರ್ ಮಾಡದ ಕೃಷಿ ವಿವಿ”- ಅನ್ಯಾಯ ಮನೆ ಬಾಗಿಲಿಗೆ ಬಂದಾಗ ಗೊತ್ತಾಗತ್ತೆ ಎಂದು ಗರಂ ಆದ ಪೊಲೀಸ್ ಕಮೀಷನರ್….

ಧಾರವಾಡ: ಖಾಸಗಿ ಕಂಪನಿಯ ನೌಕರನೋರ್ವ ಕೃಷಿ ಮೇಳಕ್ಕೆ ಬಂದು ಸಾವನ್ನಪ್ಪಿ ಗಂಟೆಗಟ್ಟಲೇ ಅಲ್ಲೇ ಬಿದ್ದರೂ, ನಿರ್ಲಕ್ಷ್ಯ ವಹಿಸಿದ ಕೃಷಿ ವಿವಿಯವರ ಮಾನಸಿಕತೆಯ ಬಗ್ಗೆ ಪೊಲೀಸ್ ಕಮೀಷನರ್ ತೀವ್ರ ಬೇಸರವ್ಯಕ್ತಪಡಿಸಿದ್ದಲ್ಲದೇ ಗರಂ ಆಗಿರುವ ಘಟನೆ ನಡೆದಿದೆ.
ಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಪರಶುರಾಮ ಎಂಬ ನೌಕರ ಅವಘಡದಿಂದ ಸಾವನ್ನಪ್ಪಿದ್ದಾರೆ. ಆದರೆ, ಸಂಬಂಧಿಸಿದ ಯಾರೂ ಬಾರದೇ ಶವ ಅಲ್ಲಿಯೇ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿಯೇ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸರಿಯಾಗಿಯೇ ಚಳಿ ಬಿಡಿಸಿದರು.