ಛೇ.. ಆ ಶಿಕ್ಷಕ ಬದುಕಲೇ ಇಲ್ಲಾ: ಕಾಂಬ್ಳೆ ಸರ್ ಇನ್ನಿಲ್ಲ
ಧಾರವಾಡ: ಮೃತಪಟ್ಟಿದ್ದಾರೆಂದು ತಿಳಿದುಕೊಂಡು ಹುಟ್ಟಿದೂರಿಗೆ ಕರೆದುಕೊಂಡು ಹೋದಾಗ, ಮರಳಿ ಜೀವ ಬಂದಿದೆಯಂದುಕೊಂಡು ಸಿವಿಲ್ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದ ಶಿಕ್ಷಕ ಈರಣ್ಣಾ ಕಾಂಬ್ಳೆ ತೀರಿಕೊಂಡಿದ್ದೇ ಕನ್‌ಫರ್ಮ್ ಆಗಿದೆ.
ಬೈರಿದೇವರಕೊಪ್ಪದ ನಿವಾಸಿಯಾಗಿದ್ದ ಶಿಕ್ಷಕ ಈರಣ್ಣ ಕಾಂಬ್ಳೆ ಮೂಲತಃ ಹೆಬ್ಬಳ್ಳಿಯವರು. ಇಂದು ಬೆಳಿಗ್ಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದರು.
ಅಂತ್ಯಸಂಸ್ಕಾರಕ್ಕಾಗಿ ಹೆಬ್ಬಳ್ಳಿಗೆ ತೆಗೆದುಕೊಂಡು ಬರಲಾಗಿತ್ತು. ಇಲ್ಲಿ ಮತ್ತೆ ಜೀವ ಬಂದಂತಾಗಿ ಸಿವಿಲ್ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿತ್ತು. ಆದ್ರೇ, ಅವರ ಪ್ರಾಣಪಕ್ಷಿ ಹಾರಿಹೋಗಿದ್ದೆ ಸತ್ಯವೆಂದು ವೈದ್ಯರು ತಿಳಿದರು.
ಮೃತ ಶಿಕ್ಷಕನ ಕುಟುಂಬ ರೋಧನ ಆಸ್ಪತ್ರೆಯ ಮುಂಭಾಗದಲ್ಲಿ ಮುಗಿಲು ಮುಟ್ಟಿತ್ತು.