Posts Slider

Karnataka Voice

Latest Kannada News

ಶೇಂಗಾ ಗಂಟಲಲ್ಲಿ ಸಿಕ್ಕು ಮಗು ಸಾವು- ದೇವರ ಮುಂದಿಟ್ಟು, ಬದುಕಿಸು ಎನ್ನುತ್ತಿರೋ ಅಜ್ಜಿ…

1 min read
Spread the love

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿಯಲ್ಲಿ ಮಗುವೊಂದು ಗಂಟಲಲ್ಲಿ ಶೇಂಗಾ ಬೀಜ ಸಿಲುಕಿಕೊಂಡು ಉಸಿರುಗಟ್ಟಿ ಮೃತಪಟ್ಟಿತು.

ಘಟನೆಯಿಂದ ದಿಕ್ಕೇ ತೋಚದ ಮಗುವಿನ ಅಜ್ಜಿ, ಸಮೀಪದ ದೇವಸ್ಥಾನಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿ ದೇವರ ಗುಡಿಯೆದುರು ಇಟ್ಟು ಬದುಕಿಸಿಕೊಡುವಂತೆ ಅಂಗಲಾಚಿದ ಮನ ಕಲುಕುವ ಘಟನೆ ನಡೆದಿದೆ. ಯಲ್ಲಾಪುರದ ರಾಮನಾಥ ಆಚಾರಿ ಎಂಬುವವರ ಎರಡೂವರೆ ವರ್ಷದ ಸಾತ್ವಿಕ್ ಮೃತ ಮಗುವಾಗಿದ್ದು. ಬಾಲಕ ಮನೆಯಲ್ಲಿ ಇಂದು ಸಂಜೆ ಶೇಂಗಾ ಬೀಜಗಳನ್ನು ತಿಂದಿದ್ದ. ಅಚಾನಕ್ ಆಗಿ ಅದು ಗಂಟಲಲ್ಲಿ ಸಿಲುಕಿಕೊಂಡಿತು. ಇದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತು. ಮನೆಯವರು ತಕ್ಷಣವೇ ಹಾಗೂ ಹೀಗೂ ಪ್ರಯತ್ನ ಮಾಡಿ ಗಂಟಲಿನಿಂದ ಎರಡು ಶೇಂಗಾ ಬೀಜಗಳನ್ನು ಹೊರ ತೆಗೆದರು. ಆದರೂ ಉಸಿರಾಟ ಸುಧಾರಿಸದ ಕಾರಣ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.ತಕ್ಷಣ ವೈದ್ಯರು ಗಂಟಲಲ್ಲಿದ್ದ ಮತ್ತೊಂದು ಶೇಂಗಾ ಬೀಜವನ್ನು ಹೊರತೆಗೆದರು. ಆದರೆ, ಅಷ್ಟರಲ್ಲಿ ಮಗುವಿನ ಉಸಿರು ನಿಂತಿತ್ತು. ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸುತ್ತಿದ್ದಂತೆ ತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಅಜ್ಜಿ ಮೊಮ್ಮಗನ ಮೃತದೇಹವನ್ನು ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯ ಆವರಣದಲ್ಲಿರುವ ಗಣಪತಿ ಮಂದಿರಕ್ಕೆ ತೆಗೆದುಕೊಂಡು ಹೋದರು. ಗರ್ಭಗುಡಿಯೆದುರು ಮಲಗಿಸಿದ ಅಜ್ಜಿ, ದೇವಸ್ಥಾನದ ಘಂಟೆಯನ್ನು ಬಾರಿಸುತ್ತಾ, ಮಗುವನ್ನು ಬದುಕಿಸು ಎಂದು ಮೊರೆ ಹೋದರು. ಈ ಸನ್ನಿವೇಶಗಳನ್ನು ಅಸಹಾಯಕರಾಗಿ ನೋಡುತ್ತಿದ್ದವರೂ ಭಾವುಕರಾಗಿ ಅವರ ಕಣ್ಣುಗಳಲ್ಲಿ ಹನಿಗೂಡಿದ್ದವು. ನಂತರ ಕುಟುಂಬದವರು ಅಜ್ಜಿಯನ್ನು ಸಮಾಧಾನ ಪಡಿಸಿ ಅಲ್ಲಿಂದ ಕರೆದುಕೊಂಡು ಹೋದರು. ಅಜ್ಜಿ ಸತ್ತ ಮೊಮ್ಮಗನ ಬದುಕಿಸುವಂತೆ ದೇವರ ಮುಂದೆ ಶವವಿಟ್ಟು ರೋಧಿಸುತಿದ್ದುದ್ದು ಎಂತವರಲ್ಲೂ ಕಣ್ಣು ತೇವವಾಗಿಸುತಿತ್ತು. ಆದರೇ ಕಲ್ಲಿನ ದೇವರು ಮಾತ್ರ ಕಲ್ಲಾಗಿದ್ದ.


Spread the love

Leave a Reply

Your email address will not be published. Required fields are marked *

You may have missed