ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಶವ..!

ಹುಬ್ಬಳ್ಳಿ: ನಗರದ ಜನನಿಬೀಡ ಪ್ರದೇಶವಾದ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದ ಕಟ್ಟೆಗೊರಗಿ ಕೂತ ವ್ಯಕ್ತಿಯೋರ್ವ ಅಲ್ಲಿಯೇ ಪ್ರಾಣವನ್ನ ಬಿಟ್ಟಿರುವ ಘಟನೆಯೊಂದು ನಡೆದಿದೆ.

ಸುಮಾರು 35 ರಿಂದ 40 ವಯಸ್ಸಿನ ವ್ಯಕ್ತಿಯಾಗಿರುವ ಈತ ಬಹುತೇಕ ಇದೇ ಜಾಗದಲ್ಲಿ ತನ್ನ ಸಮಯವನ್ನ ಕಳೆಯುತ್ತಿದ್ದ. ಬೆಳಿಗ್ಗೆಯೂ ಅವರಿವರ ಜೊತೆ ಮಾತನಾಡುತ್ತ ಇಲ್ಲಿಯೇ ಕುಳಿತಿದ್ದ. ಆದರೆ, ಕಟ್ಟೆಗೆ ಒರಗಿ ಕೂತು ಬಹಳಷ್ಟು ಸಮಯದ ನಂತರ ದಾರಿಹೋಕರು ನೋಡಿದಾಗ ವ್ಯಕ್ತಿ ಅಲ್ಲಿಯೇ ಸಾವಿಗೀಡಾಗಿರುವುದು ಗೊತ್ತಾಗಿದೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು, ಶವವನ್ನ ಕಿಮ್ಸನ ಶವಾಗಾರಕ್ಕೆ ರವಾನೆ ಮಾಡಿದ್ದು, ವ್ಯಕ್ತಿಯ ಗುರುತಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.